“ಪಿ.ಆರ್.ಟಿ ಯುವ ಕಲಾ ಪ್ರಶಸ್ತಿ” ಪುರಸ್ಕಾರ
ಹಿರಿಯ ಕಲಾವಿದ ಶ್ರೀ ಪಿ.ಆರ್.ತಿಪ್ಪೇಸ್ವಾಮಿಯವರ ಜನ್ಮಶತಮಾನೋತ್ಸವದ ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ಟ್ರಸ್ಟ್ನಿಂದ ಕೊಡಮಾಡುವ ಗೌರವ ಪಿ.ಆರ್.ಟಿ ಯುವ ಕಲಾ ಪ್ರಶಸ್ತಿಗೆ ಚಿಕ್ಕಮಗಳೂರಿನ ಜಿಲ್ಲೆಯ ಚಿತ್ರಕಲಾ ಹಾಗೂ ಜನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ.
ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕಾರದ ಶ್ರೀಮತಿ ಮಧುಶಿಲ್ಪ ಆಚಾರ್ಯ ಹಾಗೂ ಕಡೂರಿನ ಚಿತ್ರಕಲಾ ಶಿಕ್ಷಕರಾದ, ಎಂ.ಎಸ್.ಲಿಂಗರಾಜು ಹಾಗೂ ಮೂಡಿಗೆರೆಯ ಪುರಾತನ ಜನಪದ ಸಂಗ್ರಹಕಾರರಾದ ಶ್ರೀ ಅಶೋಕ್ ರವರಿಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿನಾಂಕ: 20-09-2024 ರಂದು ಮೈಸೂರಿನ ಶ್ರೀಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುವ ಶ್ರೀ ಪಿ.ಆರ್.ತಿಪ್ಪೇಸ್ವಾಮಿಯವರ ಜನ್ಮಶತಮಾನೋತ್ಸವದ ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಿದ್ದಾರೆ.
ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡಮಿಯ ಸದಸ್ಯರಾದ ವಿಶ್ವಕರ್ಮ ಆಚಾರ್ಯರು ಹಾಗೂ, ವಿದ್ಯಾರ್ಥಿ ವೃಂದ, ಆಡಳಿತ ವೃಂದ ಅಭಿನಂದನೆಯನ್ನು ತಿಳಿಸಿದ್ದಾರೆ.-
ಪಿ ಆರ್ ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭಕ್ಕೆ ತಮಗೆಲ್ಲರಿಗೂ ಸುಸ್ವಾಗತ.
– Vishwakarma Acharya (FB)