Live Stream

[ytplayer id=’22727′]

| Latest Version 8.0.1 |

State News

ದಾಂಪತ್ಯ ದೃಶ್ಯಲೋಕ ದರ್ಶನ-” 𝗥𝗘𝗙𝗟𝗘𝗖𝗧𝗜𝗢𝗡𝗦 — 𝗔 𝗝𝗢𝗨𝗥𝗡𝗘𝗬 𝗜𝗡 𝗧𝗪𝗢 𝗣𝗘𝗥𝗦𝗣𝗘𝗖𝗧𝗜𝗩𝗘𝗦”

ದಾಂಪತ್ಯ ದೃಶ್ಯಲೋಕ ದರ್ಶನ-” 𝗥𝗘𝗙𝗟𝗘𝗖𝗧𝗜𝗢𝗡𝗦 — 𝗔 𝗝𝗢𝗨𝗥𝗡𝗘𝗬 𝗜𝗡 𝗧𝗪𝗢 𝗣𝗘𝗥𝗦𝗣𝗘𝗖𝗧𝗜𝗩𝗘𝗦”

ದಾಂಪತ್ಯ ದೃಶ್ಯಲೋಕ ದರ್ಶನ
ತನ್ನ ದಶವಾರ್ಷಿಕ ಸಂಭ್ರಮದಲ್ಲಿರುವ ಬೆಂಗಳೂರಿನ
Art Houz ಪ್ರಸ್ತುತ ಅಪೂರ್ವ ಎನ್ನಲೇಬೇಕಾದ ಕಲಾ ಪ್ರದರ್ಶನವಾದ ” 𝗥𝗘𝗙𝗟𝗘𝗖𝗧𝗜𝗢𝗡𝗦 — 𝗔 𝗝𝗢𝗨𝗥𝗡𝗘𝗬 𝗜𝗡 𝗧𝗪𝗢 𝗣𝗘𝗥𝗦𝗣𝗘𝗖𝗧𝗜𝗩𝗘𝗦” ಶೀರ್ಷಿಕೆಯಡಿ ಕಲಾಭಿಮಾನಿಗಳಿಗೆ ( 15 – 30,ಸೆಪ್ಟೆಂಬರ್, 2024 ) ತೆರೆದಿಟ್ಟಿದೆ. ‘ದಂಪತಿ ‘, ‘ದಾಂಪತ್ಯ ‘ ನಮ್ಮ ಸಂಸ್ಕೃತಿಯಲ್ಲಿ ಬಹು ಪ್ರಾಮುಖ್ಯತೆಯನ್ನು ಪಡೆದ ಗೌರವನೀಯ ಪದಗಳು.

ದಾಂಪತ್ಯದ ಕುರಿತು ಬರೆಯದ ಕನ್ನಡ ಸಾಹಿತ್ಯ ಲೋಕದ ಯಾವೊಬ್ಬ ಕವಿಯನ್ನು ನಾವು ಕಾಣಲಾರೆವು. ಸೃಜನಶೀಲರೆಲ್ಲ ಹೀಗೆಯೇ. ಪಂಚಭೂತಗಳ, ಭೂಮಿ, ಆಕಾಶಗಳ , ಉತ್ತರ ದಕ್ಷಿಣ ಧ್ರುವಗಳ ಚುಂಬಕ ಗಾಳಿಯ ಕುರಿತು ಬೇಂದ್ರೆ ಹಾಡಿದಂತೆ, ಮುದ್ದಣನೂ ತನ್ನ ಪತ್ನಿ ಮನೋರಮೆಯೊಂದಿಗೆ ಸಲ್ಲಾಪವನ್ನು ದಾಖಲಿಸಿರುವ ಹಾಗೆಯೇ ,ಬಹುಶಹ ನಮ್ಮ ಎಲ್ಲ ಕವಿ, ಕಲಾವಿದರು ತಮ್ಮ ದಾಂಪತ್ಯವನ್ನು ಧ್ಯಾನಿಸಿದವರೆ ಆಗಿದ್ದಾರೆ. ಸುಮತಿಂದ್ರ ನಾಡಿಗ ದಾಂಪತ್ಯ ಗೀತೆಗಳನ್ನೇ ಬರೆದು ಪ್ರಕಟಿಸಿದರಲ್ಲವೇ! ಇವೆಲ್ಲವೂ ಒಂದು ರೀತಿಯ ಭೂಮಿಗೀತೆಯಂತೆ ಬಾಸವಾಗುತ್ತವೆ. ಹೆಣ್ಣು ಗಂಡು : ಪರಸ್ಪರತೆ ಯನ್ನು ಹಂಪನಾ, ಕಮಲಾ ಹಂಪನಾರ ಅಸದೃಶ ದಾಂಪತ್ಯದಲ್ಲಿ ಕನ್ನಡ ಜಗತ್ತು ಕಂಡಿದೆ, ಇರಲಿ. ಗಂಡ ಹೆಂಡಿರಿಬ್ಬರೂ ಕವಿಗಳು ಕಲಾವಿದರು ನಟರು ದಾರ್ಶನಿಕರು ಆಗಿರುವ ಅಸಂಖ್ಯ ಉದಾಹರಣೆಗಳು ಇಡೀ ವಿಶ್ವದ ಸಾಂಸ್ಕೃತಿಕ ರಂಗದಲ್ಲಿ ಇವೆ. ಕರ್ನಾಟಕವೇ ಅಲ್ಲದೆ ಇಡೀ ಭಾರತ ಹಾಗೆಯೇ ವಿಶ್ವದ ದೃಶ್ಯ ಕಲೆಯಲ್ಲಿ ಈ ಪರಸ್ಪರತೆಯು ವಿಶ್ವಾತ್ಮಕವಾಗುವ ಮಟ್ಟಿಗೆ ವಿಶಿಷ್ಟ ಜೀವಧ್ವನಿಯನ್ನು ಅರಗಿಸಿಕೊಂಡಿದೆ. ಹಾಗಾಗಿಯೇ ದೃಶ್ಯಕಲಾಇತಿಹಾಸದಲ್ಲಿ ಇಂಥ ದಂಪತಿಗಳ ಕುರಿತು ವಿಶಿಷ್ಟ ವಿವರಗಳು ಇದ್ದೇ ಇರುತ್ತವೆ : ನಮ್ಮಲ್ಲಿಯೂ ಹೌದು. ವೇದನಾಯರ್, ಗೋಗಿಸರೋಜಪಾಲ್, ಎಸ್ ಜಿ ವಾಸುದೇವ್ ಆರ್ನವಾಜ್ ರಂತಹ ಇನ್ನೂ ಹಲವು ಕಲಾ ದಂಪತಿಗಳ ಸಾಲಿಗೆ ಪ್ರಸ್ತುತ ಪ್ರದರ್ಶನದ ಅಮೃತಾ ಆರ್, ದರ್ಶನ್ ಕುಮಾರ್ ವೈ. ಓ./ ಆರತಿ ಎಚ್. ಕೆ, ಮಂಟಪ ಜಿ. ಕುಲಕರ್ಣಿ / ದೇವಿಪ್ರಿಯ, ವಿಮಲನಾಥನ್ ಎಸ್. ಎ./ ಸಂಗಮ ವಿ.ಬಿ, ಬಸವರಾಜ ಎಂ./ ಊರ್ಮಿಳಾ ವಿ.ಜಿ, ವೇಣುಗೋಪಾಲ್ ವಿ.ಜಿ./ ಉಷಾಮಿಶ್ರಾ , ಜ್ಞಾನೇಶ್ ರಂಜನ್ ಮಿಶ್ರಾ ಸೇರ್ಪಡೆಗೊಂಡಿದ್ದಾರೆ. ಇಂದಿನ ವಿಕ್ಷಿಪ್ತ ಬದುಕಿನಲ್ಲಿ ದಾಂಪತ್ಯ ಗೀತೆಯ ನುಡಿಸುವಿಕೆ ಸಾಮಾನ್ಯವಾಗಿ ಅಸಾಮಾನ್ಯವಾಗಿದೆ . ಹೇಗೋ ಇಬ್ಬರೂ ಪ್ರೀತಿಸಿ, ಡೀಗೋ ರಿವರಾ ನೊಂದಿಗೆ ಹೊಂದಿಕೊಂಡು, ಒಬ್ಬರಿಗೊಬ್ಬರು ಎನ್ನುವಂತಹ ಸಾಹಸದ ಬದುಕನ್ನು ಸಾಗಿಸಿ,ತನ್ನ ಕಲಾಕೃತಿಗಳ ಅನನ್ಯತೆಯಲ್ಲಿ ತನ್ನೊಳಗಿನ ಅಗ್ನಿ ಪರ್ವತವನ್ನು ಆಸ್ಪೋಟಿಸಿದಂತಹ ಅಭಿವ್ಯಕ್ತಿಗಳಿಗೆ ಫ್ರಿದ ಕಹಲೋ ಕಾರಣಳಾದಳಲ್ಲವೇ! ನಮ್ಮ ಸಮಕಾಲಿನ ಸಂದರ್ಭದ ಈ ದಂಪತಿಗಳು ತಮ್ಮ ಅಭಿವ್ಯಕ್ತಿಯಲ್ಲಿ ವೈಯಕ್ತಿಕತೆಯನ್ನು ಸಾಧಿಸಿಕೊಂಡಿರುವಂತಹ, ಬದುಕೇ ಬೇರೆ ತಮ್ಮ ಕಲೆಯೇ ಬೇರೆ ಎಂಬ ಗ್ರಹಿಕೆಯನ್ನು ತಮ್ಮದೇ ಆದ ವಿಶಿಷ್ಟ ರೀತಿಗಳಲ್ಲಿ ,

ವಿಭಿನ್ನ ಮಾಧ್ಯಮಗಳಲ್ಲಿ ಬಿಂಬಿಸಿದ್ದಾರೆ. ಚಿತ್ರ, ಶಿಲ್ಪ ,ರೇಖಾಚಿತ್ರ , ಪ್ರಿಂಟ್ ಗಳೊಂದಿಗೆ ಇನ್ಸ್ಟಾಲೇಷನ್ ಸಹ ಆಗಿರುವ ಕೃತಿಯೊಂದು ಪ್ರದರ್ಶನದಲ್ಲಿದೆ. ಹಲವು ಭಾವ,ರಸಬಾವ, ಅನುಭಾವಗಳು, ಹಲವು ನೆಲೆಗಳಲ್ಲಿ ಗ್ರಹಿಸಲ್ಪಟ್ಟಿವೆ. ಸಂವೇದನಾಶೀಲ ತೀವ್ರ, ತೀಕ್ಷ್ಣ ಒಳನೋಟಗಳ ಅಭಿವ್ಯಕ್ತಿಗೆ ಪ್ರಿಂಟ್ ಮೀಡಿಯಂ ತನ್ನನ್ನೇ ಅರ್ಪಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿದೆ. ಸಂವೇದನಾಶೀಲರು ಮತ್ತು ಪ್ರಿಂಟ್ ಮಾಧ್ಯಮದ ಹಲವು ತಂತ್ರಗಳನಡುವೆ ದಾಂಪತ್ಯ ಗೀತೆಯಂತಹ ವಿಶ್ವಾತ್ಮಕ ಬಾಂಧವ್ಯವಿದೆ. ಇಲ್ಲಿನ ಹಲವು ಕಲಾವಿದೆಯರ ಅಭಿವ್ಯಕ್ತಿಗಳು ನೋಡುಗರನ್ನು ಬಹುಕಾಲ ಕಾಡಬಲ್ಲವು.ಕಲ್ಲಿನ ಶಿಲ್ಪಗಳೂ ಗಣನೀಯವಾಗಿವೆ.
–KV Subramanyam

 


Vishwanath Guggari
";