ಕರ್ನಾಟಕದ ಬಹುಮುಖಿ ಕಲಾವಿದ ಪಿ.ಆರ್. ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ – 2024.
ಗೌರವ ಪಿಆರ್ಟಿ ಕಲಾಪ್ರಶಸ್ತಿ
ಮೈಸೂರಿನ ದಿ ಪಿ.ಆರ್. ತಿಪ್ಪೇಸ್ವಾಮಿಯವರು ಕೆಲವೇ ದಶಕಗಳ ಹಿಂದೆ ನಮ್ಮ ನಡುವೆ ಇಡೀ ರಾಜ್ಯದಲ್ಲಿ ಅಡ್ಡಾಡುತ್ತಿದ್ದವರು. ಕರ್ನಾಟಕದ ಹಲವು ಕಲೆಗಳ ಅಸಾಮಾನ್ಯ ಸಂಗ್ರಹಾಗಾರಗಳನ್ನು ಮೈಸೂರಿನ ಜಾನಪದ ವಿಶ್ವವಿದ್ಯಾಲಯ ಮತ್ತು ಧರ್ಮಸ್ಥಳಗಳಲ್ಲಿ (ಮಂಜುಶಾ ) ರೂಪಿಸಿದವರು. ಅವರು ಉತ್ತಮ ಭೂದೃಶ ಕಲಾವಿದರು, ಕಲಾಸಾಹಿತಿಗಳು ಆಗಿದ್ದ ಬಹುಮುಖಿ ಚಿಂತಕರು . ಮೈಸೂರಿನಲ್ಲಿ ಪಿ ಆರ್ ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭವು (20.9.2024) ತಿಪ್ಪೇಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯಿತು
ಹಲವು ಕಾರ್ಯಕ್ರಮಗಳ ನಡುವೆ ನಮ್ಮಲ್ಲಿ ಕೆಲವರನ್ನು ಗೌರವ ಪಿ ಆರ್ ಟಿ ಕಲಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನನ್ನ ಪರಿಚಿತ ಕಲಾವಿದರನ್ನು ಬಹುಕಾಲದ ನಂತರ ನೋಡುವಂತಾಯಿತು. ಆಯೋಜಕರಿಗೆ ಧನ್ಯವಾದಗಳು.
–KV Subramanyam