ಸ್ಟುಡಿಯೋ ಕಲಾವಿಸ್ತಾರ ಆಯೋಜನೆಯ
” ವೈವಿಧ್ಯಮಯ ಗ್ರಹಿಕೆಗಳು | Diverse Perceptions” ಕಲಾಪ್ರದರ್ಶನದ ಮೂರನೇ ದಿನವಾದ ಶನಿವಾರ ಹಿರಿಯ ಕಲಾವಿದರಾದ ವಿ. ಹರಿರಾಂ ಅವರ ಕಲಾಪಯಣದ ಕುರಿತು ಮಾತುಕತೆ ನಡೆಯಿತು. ” On various aspects of evolution as an abstract painter ” ವಿಷಯದ ಮೇಲೆ ಮಾತನಾಡಿದರು. ಅನೇಕ ಕಲಾವಿದರು, ಕಲಾವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಾರ್ಥಕವೆನಿಸುವ ಕಾರ್ಯಕ್ರಮ ಇದಾಗಿತ್ತು. ಇಂದಿನ ಕಲಾ ವಿದ್ಯಾರ್ಥಿಗಳು ಮತ್ತು ಯುವ ಕಲಾವಿದರಲ್ಲಿ ಮೂಡುವ ಎಷ್ಟೋ ಗೊಂದಲಗಳಿಗೆ ಹರಿರಾಂ ಅವರು ಬಹಳ ಸ್ಪಷ್ಟವಾಗಿ ಉತ್ತರಿಸಿದರು.
ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಗ್ಯಾಲರಿಯಲ್ಲಿ ನಡೆಯುತ್ತಿರುವ ” ವೈವಿಧ್ಯಮಯ ಗ್ರಹಿಕೆಗಳು | Diverse Perceptions ” ಸೆಪ್ಟೆಂಬರ್ 29ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಭೇಟಿ ನೀಡಿ.
Courtesy: #ಸ್ಟುಡಿಯೊಕಲಾವಿಸ್ತಾರ #studiokalavistaara #kalavistaara #ಅಗ್ನಿಪ್ರಪಂಚ #agniprapancha