ಪ್ರತಿಷ್ಠಿತ ವೆಂಕಟಪ್ಪ ಹಾಗೂ ರಾಷ್ಟ ಪ್ರಶಸ್ತಿ ಪುರಸ್ಕೃತ ,ಅಂತರರಾಷ್ಟ್ರೀಯ ಕಲಾವಿದ ಶ್ರೀ ವಿಜಯ ಸಿಂಧೂರ ಸರ್ ರವರು ಇಂದು ದಿನಾಂಕ 28-9-2024 ರಂದು ನಿಧನರಾದ ಸುದ್ದಿ ಕೇಳಿ ತುಂಬಾ ದುಃಖವಾಯಿತು…
ಜಮಖಂಡಿಯ ಅವರ ಮನೆಗೆ ಸಾಕಷ್ಟು ಸಲ ಹೋದಾಗ ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ರೇಖಾಚಿತ್ರಗಳನ್ನು,,ಹೊಸ ಕಲಾಕೃತಿಗಳನ್ನು ತೋರಿಸುತ್ತಾ ಅನುಭವ ಹಂಚಿಕೊಳ್ಳುತ್ತಿದ್ದರು,,,ಮಾರ್ಗದರ್ಶನ ಮಾಡುತ್ತಿದ್ದರು. ನಮ್ಮ ಶ್ರೀ ವಿವೇಕಾನಂದ ಕಲಾ ಮಂದಿರ ರಾಯಬಾಗ ಅವರನ್ನು ಕರೆಯಿಸಿದಾಗ ವಿದ್ಯಾರ್ಥಿಗಳೊಂದಿಗೆ ಬೆರೆತು,,,ಉಪನ್ಯಾಸ ನೀಡಿ,ಕಲಾ ಪ್ರಾತ್ಯಕ್ಷಿಕೆಯನ್ನು ತೋರಿಸಿ ಅನುಭವ ಹಂಚಿಕೊಂಡಿದ್ದರು. ಸ್ವಲ್ಪ ಸಿಡುಕು ಸ್ವಭಾವ ಇದ್ದರೂ,ನಮ್ಮೊಂದಿಗೆ ಅತ್ಮೀಯರಾಗಿದ್ದರು. ಉಡಿಗೆ ತೊಡಿಗೆಯಲ್ಲಿ ಸದಾ ಶಿಸ್ತಿನಿಂದ ಇರುತ್ತಿದ್ದರು….ಯಾವಾಗಲೂ ರೇಖಾಚಿತ್ರ,ಕಲಾಕೃತಿ ರಚಿಸುವದರಲ್ಲಿ ನಿರತರಾಗಿರುತ್ತಿದ್ದರು. ಇಂತಹ ಹಿರಿಯ ಕಲಾವಿದರನ್ನು ಕಳೆದು ಕೊಂಡಿರುವದು ನಮಗೆಲ್ಲ ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಮತ್ತೊಮ್ಮೆ ಪ್ರಾರ್ಥಿಸುವೆ….ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವೆ,,,,
ಓಂ ಶಾಂತಿ,,,,,
–Dr-p B Gavani