Live Stream

[ytplayer id=’22727′]

| Latest Version 8.0.1 |

State News

ತೊಗಲುಬೊಂಬೆ ಕಲಾವಿದರು ಮತ್ತು ವಿವಿಗಳ ಪೇಪರ್ ಕಾಫಿ ಕಪ್!!!

ತೊಗಲುಬೊಂಬೆ ಕಲಾವಿದರು ಮತ್ತು ವಿವಿಗಳ ಪೇಪರ್ ಕಾಫಿ ಕಪ್!!!

ತೊಗಲುಬೊಂಬೆ ಕಲಾವಿದರು ಮತ್ತು ವಿವಿಗಳ ಪೇಪರ್ ಕಾಫಿ ಕಪ್!!!
ಕಳೆದ ವಾರ ನಾವು ಆಯೋಜಿಸಿದ್ದ ಸುಂದರಕಾಂಡ ತೊಗಲುಬೊಂಬೆ ಕಾರ್ಯಾಗಾರದ ಭಾಗವಾಗಿ ಎಲ್ಲ ತೊಗಲುಬೊಂಬೆ ತಂಡಗಳನ್ನು ವಿವಿಧ ವಿಶ್ವವಿದ್ಯಾಲಯಗಳಿಗೆ ಪ್ರದರ್ಶನ ನೀಡಲು ಪ್ರತಿದಿನ ಕರೆದೊಯ್ಯಲಾಯಿತು. ನನಗೊಂದು ವಿಚಿತ್ರ ಅನುಭವ ಗಮನಕ್ಕೆ ಬಂತು. ಅವರನ್ನು ಸ್ವಾಗತಿಸಲು ಅಲ್ಲಿನ ಆಡಳಿತ ಮಂಡಳಿ,ವಿಸಿ ಇಲ್ಲವೆ ಡೀನ್ ಬರುತ್ತಾರೆಂದು ಭಾವಿಸಿದ್ದೆ, ನನ್ನ ಊಹೆ ಸುಳ್ಳಾಗಿತ್ತು. ಓರ್ವ ಸಹಾಯಕ ಅಧ್ಯಾಪಕರು ಅವರನ್ನು ಬರಮಾಡಿಕೊಂಡರು. ಅವರನ್ನು ಸಭಾಂಗಣದೊಳಗೆ ಕರೆದೊಯ್ದ ನಂತರ ಕಲಾವಿದರು ತಮ್ಮ ವೇದಿಕೆ ಸಿದ್ದಪಡಿಸಿಕೊಳ್ಳತೊಡಗಿದರು. ಅವರಿಗೆ ನೀಡಿದ್ದು ಬಸ್ ಸ್ಟಾಂಡ್ ಗಳಲ್ಲಿ ನೀಡುವಂತೆ ಪೇಪರ್ ಲೋಟದಲ್ಲಿ ಚಹಾ!!!
ಇದೇ ವಿಶ್ವವಿದ್ಯಾಲಯಗಳಿಗೆ ಐಐಎಂ ನಿಂದಲೋ ಐಐಟಿಯ ಪ್ರೋಫೆಸರ್ ಗಳು ಇಲ್ಲವೆ ದೊಡ್ಡ ಉದ್ಯಮಿಪತಿ ಉಪನ್ಯಾಸ ನೀಡಲು ಬಂದರೆ ಸ್ವತಃ ವಿಸಿಗಳು ಬೊಕೆ ಹಿಡಿದು ದ್ವಾರದ ಬಳಿ ನಿಂತು ಕಾರಿನ ಬಳಿ ಸ್ವಾಗತಿಸಿ ಛೇಂಬರಿಗೊ ಇಲ್ಲ ಬೋರ್ಡ್ ರೂಮಿನಲ್ಲೊ black coffee ಕೊಟ್ಟು ಉಪಚರಿಸುತ್ತಾರೆ. ಆದರೆ ಕಲಾವಿದರಿಗೆ ಎಂಥ ಆತಿಥ್ಯ!! ಕನಿಷ್ಠ ಇವರುಗಳು ಬಂದು ಭೇಟಿ ಮಾಡಲಿಲ್ಲ, ಕೇಳಿದರೆ ಅವರುಗಳು ಮೀಟಿಂಗ್ ಬ್ಯೂಸಿ ಎಂದರು ನಾನು ಮೊದಲೆ ಹೇಳಿದ್ದರೆ ಅವರ ಫ್ರೀ ಟೈಂನಲ್ಲಿ ಬರುತ್ತಿದ್ದೇವಲ್ಲ ಎಂದೆ. ಕಲೆ ವಿಚಾರಗಳು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ವಿಷಯವೇ ಅಲ್ಲವಲ್ಲ, ಅವರಿಗೆ ಕಲೆ ನೆನಪಾಗುವುದೆ ಕೊನೆಗೆ. ಅದು ಎಲ್ಲ ಮುಗಿದು ಮೇಲೆ. ಬ್ರಿಟಿಷ್ ಕಲಿಸಿ ಹೋದ ಶಿಕ್ಷಣ ಕ್ರಮದಲ್ಲಿ ಕಲೆಯ ಪಿರಿಯಡ್ ಬರುವುದೇ ಕಟ್ಟಕಡೆಗೆ. ಮೊದಲ ಪಿರಿಯಡ್ ಕಲೆ ಇಲ್ಲವೆ ಕ್ರೀಡೆಯಿಂದ ಆರಂಭಗೊಳ್ಳುವ ಶಿಕ್ಷಣ ಸಂಸ್ಥೆಗಳೆ ಇಲ್ಲ!!


ಈ ಮಧ್ಯೆ ಸಂತೋಷದ ಸಂಗತಿಯೆಂದರೆ ಪ್ರದರ್ಶನಗಳಿಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆ! ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಶಿಳ್ಳೆ, ಚಪ್ಪಾಳೆ ಮೂಲಕ ಪ್ರದರ್ಶನ ಆಸ್ವಾದಿಸಿದರು!… ಹನುಮಂತನ ಸಾಗರೋಲ್ಲಂಘನ, ರಾವಣ ಸಂಹಾರ ದೃಶ್ಯಗಳು ಅವರ ಮನಮುದಗೊಳಿಸಿದವು. ಬಹಶಃ ಸೋಲುಗಳ ನಡುವೆ ಸಾಗಿರುವ ಕನ್ನಡ ಚಿತ್ರೋದ್ಯಮವು ಈ ಪ್ರೇಕ್ಷಕರ ನಿರೀಕ್ಷೆಗಳು ಎನು ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದೇನೊ..
ದೇಶ ಸಂಸ್ಕೃತಿ, ಪರಂಪರೆ ಉಳಿಸಬೇಕೆಂದು ವೇದಿಕೆಗಳಲ್ಲಿ ಛಾಷಣ ಮಾಡುತ್ತಾರೆ ಕಲಾವಿದರು ಇವರ ಬಾಗಿಲಿಗೆ ಬಂದಾಗ ಹೀಗೆ ನಡೆಸಿಕೊಳ್ಳುತ್ತಾರೆ. ಬಹುಶಃ ಅವರ ಕಲೆ ಸಂಸ್ಕೃತಿ ಕಾಳಜಿಗಳು ಬರೀ ಬಾಯಿ ಮಾತಿಗೆ ಸೀಮಿತ! ಈ ಪೈಕಿ ಜೈನ್ ವಿಶ್ವವಿದ್ಯಾಲಯವು ತುಸು ವಾಸಿ, ಸ್ವತಃ ಉಪಾಧ್ಯಕ್ಷರು ಬಂದು ಪ್ರದರ್ಶನ ನೀಡಿದ ತೊಗಲುಬೊಂಬೆ ಕಲಾವಿದರಿಗೆ ಕೈತುಂಬ ಸ್ಮರಣಿಕೆ ನೀಡಿ ಅಭಿನಂದಿಸಿದರು.


ಈ ಕಾರ್ಯಾಗಾರದ ಜವಾಬ್ದಾರಿ ಹೊತ್ತಿದ್ದ ಬೆಂಗಳೂರು ಪ್ರಾದೇಶಿಕ ಕೇಂದ್ರದ ಸಿಬ್ಬಂದಿಗಳು ಮೊದಲು ಆಗಮಿಸಿದ ತಂಡದ ಸ್ವಾಗತಿಸುವ ಕೆಲಸದಿಂದ ಹಿಡಿದು ನೆನ್ನೆ ರಾತ್ರಿ 11ಕ್ಕೆ ರೈಲು ಮೂಲಕ ಪ್ರಯಾಣ ಬೇಳೆಸಿದ ಕನ್ಯಾಕುಮಾರಿ ತಂಡವನ್ನು ರೈಲಿನಲ್ಲಿ ಕೂಡಿಸಿ, ಊಟ, ನೀರಿನ ಬಾಟಲಿ ನೀಡಿ ಬಿಳ್ಕೋಡುವವರೆಗೂ ನನ್ನ ಸಿಬ್ಬಂದಿಗಳು ಶ್ರಮವಹಿಸಿದಾರೆ. ಅವರಿಗೆಲ್ಲ ಧನ್ಯವಾದಗಳು.

–D. Mahendra


Vishwanath Guggari
";