” ಇಂದು ಆರಂಭಗೊಂಡಿರುವ ಐ.ಎಫ್. ಎ ಸಂಸ್ಥೆಯ Past Forward – Pleasure l Purpose | Practice ಕಲಾ ಸಂಶೋಧನೆಯ ಉತ್ಸವದ ವಿಶೇಷ ಕಾರ್ಯಕ್ರಮಗಳನ್ನು ವೀಕ್ಷಿಸಿದೆ. ತುಂಬಾ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ಒಬ್ಬ ಹಳ್ಳಿಗಾಡಿನ ಕಲಾವಿದನಾಗಿ ದೇಶದ ವಿವಿಧ ಮೂಲೆಯ ಕಲಾವಿದರನ್ನು ಐ.ಎಫ್.ಎ ಸಂಸ್ಥೆಯ ನೇತೃತ್ವದಲ್ಲಿ ಪರಿಚಯ ಮಾಡಿಕೊಳ್ಳುತ್ತಿರುವುದು ತುಂಬಾ ಹೆಮ್ಮೆಯಾಗುತ್ತಿದೆ.ನಾಳೆ ಇದೇ ಕಾರ್ಯಕ್ರಮದಲ್ಲಿ ನನ್ನ ಸಂಶೋಧನಾ ಯೋಜನೆ ಕುರಿತ ವಿಷಯವನ್ನು ಕೃಷ್ಣಮೂರ್ತಿ ಸರ್ ಅವರ ಜೊತೆಯಲ್ಲಿ ಈ ಉತ್ಸವದಲ್ಲಿ ಇತರ ಕಲಾವಿದರೊಂದಿಗೆ ಹಂಚಿಕೊಳ್ಳಲು ಸಂತೋಷ ಆಗುತ್ತಿದೆ. ಅಪರೂಪದ ಅವಕಾಶ ಕಲ್ಪಿಸಿದ ಐ.ಎಫ್.ಸಂಸ್ಥೆಗೆ ಧನ್ಯವಾದಗಳು ”
ಮೋಹನ್ ಕುಮಾರ್ : ಜಾನಪದ ಕಲಾವಿದರು
ಮೋಹನ ತಿಳಿಸಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ನಡುವೆ ಕಲಾಶಿಕ್ಷಣದ ಒಬ್ಬ ಸಾಧಕ ತನ್ನ ಕಾಡು ಗೊಲ್ಲ ಸಮುದಾಯದ ಸೊಲ್ಲುಗಳನ್ನು ಪರಿಚಯಿಸುತ್ತಿರುವುದು ಒಂದು ಸಾಧನೆಯೆ. ಇದೇ ಹಾದಿಯಲ್ಲಿ ಶ್ರೀಕಾಂತ್ ನವಲಗರಿ ಮತ್ತು ವೆಂಕಟೇಶ್ ಪ್ರಸಾದ್ – ಕಲಾ ಶಿಕ್ಷಣದಿಂದ ಹಿಂದೆ ಅನುದಾನನ್ನು ಪಡೆದಿದ್ದರೂ ಕಲಾ ಸಂಶೋಧನೆ ಮತ್ತು ಕಲಾ ಪ್ರಕಾರಗಳಲ್ಲಿ ವಯಕ್ತಿಕ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಒಂದು ರೀತಿಯಲ್ಲಿ , ನಮ್ಮ ಕಲಾ ಶಿಕ್ಷಣದ ಅಂದಿನ ಇವರುಗಳ ಯೋಜನೆಯಗಳು – ಅವರುಗಳ ಆಲೋಚನೆಯ ಮಾರ್ಗಗಳಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟಿಹಾಕಿವೆ ಎಂದರೆ ತಪ್ಪಾಗುವುದಿಲ್ಲಾ. ಮತ್ತು ಕನ್ನಡದ ಅಸ್ಮಿತೆಗಳು ಇತರರಿಗೆ ಪರಿಚಯವಾಗುತ್ತಿವೆ.
ನಿಮ್ಮೆಲ್ಲರಲ್ಲೂ ಇಂತಹ ಸಂಶೋಧನೆಯ ಆಶಯಗಳಿದ್ದರೂ ದಿನನಿತ್ಯದ ಜಂಜಾಟಗಳಲ್ಲಿ ಹಂಚಿಕೊಳ್ಳದೆ ಮುಂದೂಡುತ್ತಿರಬಹುದು. ಅಥವಾ ಎಷ್ಟೋ ಬಾರಿ “ನನ್ನ ಸಂಶೋಧನೆ ಬಾಲಿಷವಾಗಿದೆ” ಎಂಬ ಹಿಂಜರಿಕೆ ಇರಬಹುದು.
ಯಾವ ಆಲೋಚನೆಗಳು ಬಾಲಿಷವಲ್ಲಾ. ನಮ್ಮ ಕನ್ನಡದ ಕಲಾ ಪ್ರಕಾರಗಳಿಗೆ ನಿಮ್ಮಿಂದ ವಿಶ್ವವಿದ್ಯಾಲಯಗಳೂ ಸಹ ನಡೆಸದ ಸಂಶೋಧನೆಗಳು ಬರಲಿ ಎಂದು ಆಶಿಸುತ್ತೇನೆ.
ಕಾಲೇಜು ಶಿಕ್ಷಣದ ವ್ಯಾಪ್ತಿಯಲ್ಲೇ ನಡೆಯುತ್ತಿದ್ದ ನನ್ನ ಆಲೋಚನೆಗಳಿಗೆ ‘ ಕಲಿಕಲಿಸು ‘ ನಿಂದಾಗಿ ಕುತೂಹಲ ಜಾಸ್ತಿ ಆಗಿದೆ. ಹುಡುಕಾಟವೂ ಹೆಚ್ಚಿದೆ.
ಇಂದು – ನಾಳೆ ಬೆಂಗಳೂರಿನಲ್ಲಿದ್ದರೆ Bangalore International Centre, Domlur – ಇಲ್ಲಿಗೆ ಬನ್ನಿ ಸಿಗೋಣ -ಧನ್ಯವಾದಗಳು
–FB…