Live Stream

[ytplayer id=’22727′]

| Latest Version 8.0.1 |

Local News

| ವಿಮಾನ ನಿಲ್ದಾಣದ ಆವರಣದಲ್ಲಿ Art Park |

| ವಿಮಾನ ನಿಲ್ದಾಣದ ಆವರಣದಲ್ಲಿ Art Park |

| ವಿಮಾನ ನಿಲ್ದಾಣದ ಆವರಣದಲ್ಲಿ Art Park |
• ಕಲಾಕೃತಿಗಳನ್ನು ನೋಡಿ ಆನಂದಿಸಿದ ಪ್ರಯಾಣಿಕರು
ಲೋಹದ ಹಕ್ಕಿಗಳ ಹಾರಾಟದ ಸದ್ದು ಒಂದು ಕಡೆಯಾದರೆ, ಅತ್ತಿಂದಿತ್ತ… ಇತ್ತಿಂದತ್ತ… ಧಾವಂತದಲ್ಲಿ ಓಡಾಡುವವರು ಇನ್ನೊಂದೆಡೆ. ಚೆಕ್ ಇನ್ ಆಗ್ಲಿಕ್ಕೆ ಇನ್ನೂ ಸಮಯ ಇದೆ ಅಂದುಕೊಂಡವರಿಗೆ ಮತ್ತು ಚೆಕ್ ಔಟ್ ಆದ್ಮೇಲೆ ಸ್ವಲ್ಪ ಸಮಯ ಇಲ್ಲೆ ಕಳೆದು ಹೋಗೋಣ ಅಂದುಕೊಂಡವರಿಗೆ ‘Art Park’ ಒಂದು ವಿನೂತನ ಅನುಭವ ನೀಡುವ ತಾಣವಾಗಿತ್ತು!


ಬೆಂಗಳೂರು ವಿಮಾನನಿಲ್ದಾಣ ಟರ್ಮಿನಲ್ 2ರಲ್ಲಿ (arrivals, near cothas coffee) ಈ ತಿಂಗಳ Art Park ಏಪ್ರಿಲ್ 16ರಂದು ನಡೆಯಿತು. ಸಂಸ್ಥಾಪಕ, ಮಾರ್ಗದರ್ಶಕರಾದ ಹಿರಿಯ ಕಲಾವಿದ ಎಸ್.ಜಿ.ವಾಸುದೇವ್ ಅವರ ಉಪಸ್ಥಿತಿಯಲ್ಲಿ 26ಮಂದಿ ಕಲಾವಿದರು ಸ್ಥಳದಲ್ಲಿಯೇ ಕಲಾಕೃತಿ ರಚಿಸಿ ಗಮನ ಸೆಳೆದರು. ತಾವು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶಿಸಿ ಕಲಾಸಕ್ತರ ಜೊತೆ ಮಾತುಕತೆ ನಡೆಸಿದರು.


ಕಲೆ, ಕಲಾವಿದರ ಕುರಿತಾದ ಅಭಿರುಚಿ ಹೆಚ್ಚಿಸುವಲ್ಲಿ ಬೆಂಗಳೂರು ವಿಮಾನನಿಲ್ದಾಣ ಆಡಳಿತ ಮಂಡಳಿ Art Park ನಂತಹ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ಅಭಿನಂದನಾರ್ಹ. ಇದೇ ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ಪ್ರಯಾಣಿಕರಿಗೆ ಹೊಸದೊಂದು ರುಚಿ ಉಣಬಡಿಸುವ ಸಾಹಸಕ್ಕೆ ಮುಂದಾಗಿರುವುದು ಗಮನಾರ್ಹವೂ ಹೌದು.


ಕಲಾಕೃತಿಗಳ ಮೌಲ್ಯಗಳ ಬಗ್ಗೆ, ಕಲಾಕೃತಿಗಳನ್ನು ನೋಡುವ ಮತ್ತು ನೋಡಿ ಅನುಭವಿಸುವ ಬಗ್ಗೆ, ಕಲಾಕೃತಿಗಳನ್ನು ರಚಿಸಿದ ಕಲಾವಿದರ ಜೊತೆ ನೇರವಾಗಿ ಮಾತನಾಡುವ ಅವಕಾಶವನ್ನು ಇಂತಹ ವೇದಿಕೆಗಳು ಸೃಷ್ಟಿಸಿಕೊಡುತ್ತವೆ. ಅಲ್ಲದೆ, ಕಲಾ ಪ್ರಕಾರಗಳ ಕುರಿತಾದ ಮಾಹಿತಿಗಳ ವಿನಿಮಯವೂ ಸಾಧ್ಯವಾಗುತ್ತದೆ ಎನ್ನುವುದಕ್ಕೆ Art Park ಸಾಕ್ಷಿಯಾಯಿತು. Art Park ಅಧ್ಯಕ್ಷರಾದ ಭಾಗ್ಯ ಅಜಯ್ ಕುಮಾರ್, ಕಲಾವಿಮರ್ಶಕಿ ನಳನಿ ಮಾಳವೀಯ (Nalini Malaviya) ಉಪಸ್ಥಿತರಿದ್ದರು.


ವ್ಯವಸ್ಥಿತ ಆಯೋಜನೆ ಆಗಿದ್ದರಿಂದ ಅನಾನುಕೂಲದ ಪ್ರಶ್ನೆಯೇ ಉದ್ಭವಿಸಲಿಲ್ಲ. ಇನ್ನಷ್ಟು ದೃಶ್ಯಕಲಾ ಕಾರ್ಯಕ್ರಮಗಳಿಗೆ ವಿಮಾನನಿಲ್ದಾಣ ವೇದಿಕೆಯಾಗಲಿ. ಈ ಮೂಲಕ ಕಲಾಸಕ್ತ ಪ್ರಯಾಣಿಕರು ಮತ್ತು ಕಲಾವಿದರ ಅನುಬಂಧ ಹೆಚ್ಚಲಿ. ಅಭಿನಂದನೆಗಳು

Courtesy :
#artparkbengaluru #ArtPark #artist #BLRAirport #bengaluruairport #blrterminal2 #ಅಗ್ನಿಪ್ರಪಂಚ #agniprapancha #artkarnataka #karnatakaart
—-Ganapathi Agnihothri


Vishwanath Guggari
";