Live Stream

[ytplayer id=’22727′]

| Latest Version 8.0.1 |

State News

ಹಸಿರು ಹಾಸಿನ ಮಡಿಲು,ಸೌಂದರ್ಯದ ಕಡಲ ನಡುವೆ ಕ್ಯಾನ್ವಾಸ್ ಮೇಲೆ ಬಣ್ಣಗಳ ಆಯಾಮ.

ಹಸಿರು ಹಾಸಿನ ಮಡಿಲು,ಸೌಂದರ್ಯದ ಕಡಲ ನಡುವೆ ಕ್ಯಾನ್ವಾಸ್ ಮೇಲೆ ಬಣ್ಣಗಳ ಆಯಾಮ.

ಹಸಿರು ಹಾಸಿನ ಮಡಿಲು, ವಿದ್ಯಾ ಸಂಗಮ, ಮಾವು-ಹೂವು ಸೌಂದರ್ಯದ ಕಡಲ ನಡುವೆ ಕ್ಯಾನ್ವಾಸ್ ಮೇಲೆ ಬಣ್ಣಗಳ ಆಯಾಮ. ಬೆಳ್ಳಂಬೆಳಗ್ಗೆ ಯೋಗ, ದೇಹ ದಂಡಿಸುವ ವ್ಯಾಯಾಮ. ವರ್ಣಿಸಲು ಸಾಧ್ಯವಾಗದ ರೀತಿಯಲ್ಲಿ ದೇಹಕ್ಕೆ, ಮನಸ್ಸಿಗೆ ಶಕ್ತಿ, ಆಸಕ್ತ ವಿದ್ಯಾರ್ಥಿಗಳ ಜತೆ ಮಾತುಕತೆ!


ಬಹಳ ದಿನಗಳ ಬಳಿಕ ಇಂತಹದ್ದೊಂದು ಕಲಾ ಶಿಬಿರದಲ್ಲಿ ಪಾಲ್ಗೊಂಡಿದ್ದೇನೆ. ಜೈನ್ ವಿಶ್ವವಿದ್ಯಾಲಯ (JAIN DEEMED TO BE UNIVERSITY), ಶಾಂತಾಮಣಿ ಕಲಾಕೇಂದ್ರ (SHANTAMANI KALAKENDRA) ಆಶ್ರಯದಲ್ಲಿ ಬೆಂಗಳೂರು-ಕನಕಪುರ ಮಾರ್ಗದ ಜೈನ್ ಗ್ಲೋಬಲ್ ಕ್ಯಾಂಪಸ್ ಆವರಣದಲ್ಲಿ ಕಲಾ ಶಿಬಿರದ ಹೆಸರಲ್ಲಿ ಕಲಾ ಸಂಗಮವಾಗಿದ್ದು, ಮನಸ್ಸಿಗೆ ಖುಷಿ ಕೊಟ್ಟಿದೆ, ಕೊಡುತ್ತಿದೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಕಲಾಕ್ಷೇತ್ರದ ಸಾಕಷ್ಟು ವಿಚಾರಗಳ ವಿನಿಮಯವಾಗುತ್ತಿದೆ.


ಕಲಾಶಿಬಿರದ ಒಂದಿಷ್ಟು ಚಿತ್ರ ಪಟಗಳು ಇಲ್ಲಿವೆ. ಇನ್ನಷ್ಟು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಕಲಾಶಿಬಿರ ನಾಳೆ, ಶುಕ್ರವಾರ (ಮೇ 9) ಸಂಪನ್ನಗೊಳ್ಳಲಿದೆ.

–Ganapathi Agnihothri

——————————————————————————————————————————————


Vishwanath Guggari
";