Live Stream

[ytplayer id=’22727′]

| Latest Version 8.0.1 |

India News

ಒಂದು ವಾರಕಾಲ ಬೆಂಗಳೂರಿನಲ್ಲಿ ತೊಗಲುಬೊಂಬೆ ಪ್ರದರ್ಶನ

ಒಂದು ವಾರಕಾಲ ಬೆಂಗಳೂರಿನಲ್ಲಿ ತೊಗಲುಬೊಂಬೆ ಪ್ರದರ್ಶನ

ಸಾರ್ವಜನಿಕರಿಗೆ ಪ್ರದರ್ಶನ ಸಮಯ ಮತ್ತು ಸ್ಥಳ –
1) 23.09.2024 – ಜನಸೇವಾವಿದ್ಯಾ ಕೇಂದ್ರ, ಚೆನ್ನೇನಹಳ್ಳಿ – 6 PM
2) 24.09.2024 – ಜೈನ್ ವಿಶ್ವವಿದ್ಯಾಲಯ, ಜಯನಗರ – ಮಧ್ಯಾಹ್ನ 2 ರಿಂದ 3.30
3) 25.09.2024 – ಪಿಇಎಸ್ ವಿಶ್ವವಿದ್ಯಾಲಯ,
ಪ್ರದರ್ಶನ ಕಲೆಗಳ ವಿಭಾಗ, ಹೊಸಕೆರೆಹಳ್ಳಿ, – ಮಧ್ಯಾಹ್ನ 2 ರಿಂದ 4 ರವರೆಗೆ
4) 25.09.2024 – ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC), BP ವಾಡಿಯಾ ರಸ್ತೆ, ಬಸವನಗುಡಿ ಕಾರ್ಯಕ್ರಮದ ಸಮಯ- 6.30 PM-8pm
5) 26.09.2024 ಕರ್ನಾಟಕ ಚಿತ್ರಕಲಾ ಪರಿಷತ್ತು, ರಾಜರಾಜೇಶ್ವರಿ ನಗರ – ಮಧ್ಯಾಹ್ನ 3:30
(ಭಾಗವಹಿಸುತ್ತೀರುವ ರಾಜ್ಯಗಳು ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಹಾಗು ಒಡಿಸ್ಸಾ)

ಒಂದು ವಾರಕಾಲ ಬೆಂಗಳೂರಿನಲ್ಲಿ ತೊಗಲುಬೊಂಬೆ ಪ್ರದರ್ಶನ ಕುರಿತ ಕಾರ್ಯಾಗಾರವೊಂದನ್ನು ನಾವು ಆಯೋಜಿಸುತ್ತಿದ್ದೇವೆ, ದೇಶದ ಎಂಟು ರಾಜ್ಯಗಳಿಂದ 5೦ಕ್ಕೂ ಹೆಚ್ಚು ಕಲಾವಿದರು ಬೆಂಗಳೂರಿಗೆ ಬರಲಿದ್ದಾರೆ. ಈ ಕಾರ್ಯಾಗಾರದಲ್ಲಿ ಸುಂದರಕಾಂಡದ ಕುರಿತು ಹೊಸ ಪ್ರದರ್ಶನ ತಯಾರಿ, ರೂಪುರೇಷೆಗಳು ಸಿದ್ದಗೊಳ್ಳಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಆಯ್ದ ಸ್ಥಳಗಳಲ್ಲಿ ಪ್ರತಿ ತಂಡ ಸಾರ್ವಜನಿಕರಿಗೆ ಪ್ರದರ್ಶನ ನೀಡಲಿದೆ. ವಿವರಗಳನ್ನು ತಿಳಿಸಲಾಗುವುದು.


ನಾವು ಈ ಪ್ರದರ್ಶನ ಆಯೋಜನೆಯು ಹೊಸ ಪೀಳಿಗೆಗೆ, ವಿದ್ಯಾರ್ಥಿಗಳಿಗೆ ತಲುಪಲಿ ಅವರಿಗೆ ನಮ್ಮ ದೇಶದ ಕಲೆ ಸಂಸ್ಕೃತಿಗಳ ಪರಿಚಯವಾಗಲಿ ಎಂಬ ಉದ್ದೇಶದಿಂದ ಹಲವು ಕಾಲೇಜು, ಸಂಸ್ಥೆಗಳ ಸಂಪರ್ಕಿಸಿದೆವು, ಅವರ ಪ್ರತಿಕ್ರಿಯೆ ನಿರಸವಾಗಿತ್ತು. ದೇಶ, ಕಲೆ ಸಂಸ್ಕೃತಿ ಉಳಿಸಬೇಕು, ಮುಂದಿನ ಪೀಳಿಗೆಗೆ ಕಲಿಸಬೇಕು ಎಂತೆಲ್ಲಾ ಹೇಳುವ ಮಾತು ಬರಿ ಭಾಷಣಕ್ಕೆ ಅನ್ನಿಸುತ್ತೆ. ಬಹುತೇಕರು ಪರೀಕ್ಷೆ, ಓದು, ನ್ಯಾಕ್ ಕಮಿಟಿ ಸಭೆ ಅಂತೆಲ್ಲ ಹೇಳಿ ನಮ್ಮ ತೊಗಲುಬೊಂಬೆ ಕಲಾವಿದರು ಅವರ ಅಂಗಳ ಪ್ರವೇಶಕ್ಕೆ ತಡೆ ನೀಡಿಬಿಟ್ಟರು, ಇದರಲ್ಲಿ ಸೃಷ್ಟಿ ಸ್ಕೂಲ್ ಆಫ್ ಡಿಸೈನಿನ ಸೆನ್ಸಿಬಲ್ ಕವಿಯಿತ್ರಿ ಮಮತಸಾಗರ್ ಕೂಡ ಹೊರತಾಗಲಿಲ್ಲ.
ಈ ಪ್ರದರ್ಶನಗಳಿಗೆ ನೀವೂ ಬನ್ನಿ, ನಿಮ್ಮ ಮಕ್ಕಳನ್ನು ಕರೆತನ್ನಿ, ಅಳಿವಿನಂಚಿನಲ್ಲಿರುವ ತೊಗಲು ಬೊಂಬೆಯ ಪ್ರದರ್ಶನ ತಾಂತ್ರಿಕ ಉನ್ನತಿಕರಣಗೊಳಿಸುವ, ಪ್ರೋತ್ಸಾಹಿಸುವ ನಮ್ಮೀ ಯೋಜನೆಗೆ ನಿಮ್ಮ ಬೆಂಬಲವೂ ಇರಲಿ.

–D. Mahendra, Regional Director at Indira Gandhi National Centre for the Arts- Regional Centre, Bengaluru

 

 


Vishwanath Guggari
";