Live Stream

[ytplayer id=’22727′]

| Latest Version 8.0.1 |

Local News

*ಸ್ಟುಡಿಯೋ ಕಲಾವಿಸ್ತಾರದಿಂದ ಯಶಸ್ವಿ ಕಾರ್ಯಾಗಾರ* | *Deconstructing-Still Life*

*ಸ್ಟುಡಿಯೋ ಕಲಾವಿಸ್ತಾರದಿಂದ ಯಶಸ್ವಿ ಕಾರ್ಯಾಗಾರ* | *Deconstructing-Still Life*

*ಸ್ಟುಡಿಯೋ ಕಲಾವಿಸ್ತಾರದಿಂದ ಯಶಸ್ವಿ ಕಾರ್ಯಾಗಾರ* |
*Deconstructing-Still Life*
ಸ್ಟುಡಿಯೋ ಕಲಾವಿಸ್ತಾರ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಹಯೋಗದಲ್ಲಿ ಹಿರಿಯ ಕಲಾವಿದರಾದ ವೇಣುಗೋಪಾಲ ಎಚ್.ಎಸ್. ಅವರು ನಡೆಸಿಕೊಟ್ಟ “DECONSTRUCTING STILL-LIFE” ಕಾರ್ಯಾಗಾರ


ದಿನಾಂಕ : 21.12.2024 ಶನಿವಾರ ಬಹಳ ಅರ್ಥಪೂರ್ಣವಾಗಿ ನಡೆಯಿತು. 24 ಕಲಾವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕಲಿಕೆಗೆ ಪೂರಕವಾದ, ಹೊಸ ಹೊಸ ಚಿಂತನೆಗೆ ತೆರೆದುಕೊಳ್ಳುವಂತೆ ಪ್ರೇರೇಪಿಸುವ ಸದುದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಾಗಾರ ಎರಡು ಹಂತದಲ್ಲಿ ನಡೆಯಿತು.
ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರ ತನಕ, 2.30ರಿಂದ ಸಂಜೆ 5ರ ತನಕ ಶಿಬಿರಾರ್ಥಿಗಳು ಬಹಳ ಉತ್ಸಾಹದಿಂದ ಕಲಾಕೃತಿ ರಚನೆಯಲ್ಲಿ ತಲ್ಲೀನರಾಗಿದ್ದು, ಈ ಪ್ರಕ್ರಿಯೆಯ ಅಗತ್ಯತೆಗೆ ಕನ್ನಡಿಹಿಡಿದಂತಿತ್ತು. ಸ್ಟಿಲ್ ಲೈಫ್ ಅಧ್ಯಯನದ ವಿಭಿನ್ನ ದೃಷ್ಟಿಕೋನಗಳ ಬಗ್ಗೆ, ಮಾಧ್ಯಮ ಬಳಕೆಯ ಕುರಿತು ಕಾರ್ಯಾಗಾರ ನಿರ್ದೇಶಕ ವೇಣುಗೋಪಾಲ ಅವರು ಮಾಹಿತಿ ನೀಡಿದರು.

 


ಇದೇ ಸಂದರ್ಭದಲ್ಲಿ ಕರ್ನಾಟಕದ ಹಿರಿಯ ಕಲಾವಿದರಾದ ಹರಿರಾಮ್ ಅವರು Dicunstruction ಮತ್ತು ರೂಪಕಗಳ (metaphor) ಸಮ್ಮಿಲನ, ಸಮತೋಲನ ಕುರಿತಾಗಿ ಮಾತನಾಡಿದರು. ಹಿರಿಯ ಕಲಾವಿದರಾದ ವೆಂಕಟಾಚಲಪತಿ, ಎ.ಎಂ.ಪ್ರಕಾಶ್, ಸಂಜಯ್ ಚಾಪೋಲ್ಕರ್, ಗಣಪತಿ ಅಗ್ನಿಹೋತ್ರಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಕಲಾಮಂದಿರ ಕಲಾಶಾಲೆಯ ಬಿವಿಎ ವಿದ್ಯಾರ್ಥಿಗಳಾದ ರೋಹನ್ ವಿ.ಎಸ್., ಧನುಷ್ ಗೌಡ ಎಸ್., ಛಾಯಾ ಆರ್., ಮೇಘಲ ಎಂ., ಫರ್ದೀನ್ ಎಸ್., ಹರ್ಷವರ್ಧನ್ ಜೆ., ಸ್ವಾತಿ ಎನ್., ಸಿರಿಷಾ ಎನ್., ಅನುಷಾ ಎಸ್. ಭಟ್, ಅನುಷಾ ಎಸ್. ಭಟ್, ಶ್ವೇತಾ ಕೆ., ಹರ್ಷಿತಾ ಎಲ್. ಪಾಲ್ಗೊಂಡಿದ್ದರು.


IIWC ಆರ್ಟ್ ಸೆಂಟರ್ ವಿದ್ಯಾರ್ಥಿಗಳಾದ ಪ್ರಥ್ವಿ ಪ್ರಭು, ದಿವ್ಯಾ ಪಾಚ್ಛಿಪುಲುಸು, ನಾದಿಯಾ ಜಿ.ಎಸ್., ನಿರ್ಮಲಾ ಡಿ.ಎಂ., ದಿಗಂತ್, ಮಾಧುರ್ಯಾ ದ್ವಾರಕಾನಾಥ್, ರಂಜಿತಾ ಆರ್., ರಶ್ಮಿ ಶ್ರೀನಿವಾಸ್, ಶಶೀಧರ್ ಸಿ., ಸ್ನೇಹಾ ಗೋಪಾಲ್, ಲಿಕಿತಾ ಕೆ. ಪಾಲ್ಗೊಂಡಿದ್ದರು.

Courtesy:–Ganapathi Agnihothri, Studio Kalavistaara.(FB)

 


Vishwanath Guggari
";