ಕಲಾಕೃತಿಗಳ ರಚನೆಯೇ ಎಲ್ಲಕ್ಕಿಂತ ಖುಷಿ.
ಪ್ರಪಂಚ ಸುತ್ತು, ಪುಸ್ತಕ ಓದು, ಏನೇ ಮಾಡಿದರೂ ನಮಗೊಲಿದ ಕಲಾ ರಚನೆಯೇ ಸಂತೋಷ ತರುವಂತುಹುದು, ಶ್ರೇಷ್ಠವಾದದ್ದು. ಕಳೆದ ವಾರದಲ್ಲಿ ಮೂರು ಕಲಾಪ್ರದರ್ಶನ ನೋಡಿದಾಗ ಮನದಲ್ಲಿ ಮೌನವಾಗಿ ಸೂಚಿಸಿದ ಅನುಭವ. ಕಲಾಕ್ಷೇತ್ರದಲ್ಲಿ 50ಕ್ಕೂಹೆಚ್ಚು ವರ್ಷಗಳ ಕಾಲ ಕಲಾ ರಚನೆಯಲ್ಲಿ ತೊಡಗಿ, ಅನೇಕ ಶಿಷ್ಯರನ್ನು ಹೊಂದಿ ಮರೆಯಾದ ಜೆಎಮ್ಎಸ್ ಮಣಿಯವರ ಜೀವಮಾನ ಸಾಧನೆಯ NGMAನಲ್ಲಿ ನಡೆಯುತ್ತಿರುವ ಕಲಾ ಪ್ರದರ್ಶನ,
50ಕ್ಕೂಹೆಚ್ಚು ವರ್ಷಕಾಲ ಕಲಾಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡು ಇನ್ನೂ ಕಲಾಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಹೋದರರಾದ , ಭಾಸ್ಕರ್ ರಾವ್, ರಮೇಶ್ ರಾವ್ ಮತ್ತು ಸ್ನೇಹಿತರ ದ್ವಿಜ ಆರ್ಟ್ ಗ್ಯಾಲರಿಯಲ್ಲಿ ನಡೆದ ಕಲಾಪ್ರದರ್ಶನ, ಮತ್ತು ಅರಮನೆ ಮೈದಾನದಲ್ಲಿ ನಡೆದ India Art Festival ಕಲಾ ಪ್ರದರ್ಶನಗಳು, ನಮ್ಮ ದಾಕಹವಿಸದ ಸ್ನೇಹಿತರಿಗೆ ಅರವತ್ತರ ಹೊತ್ತಿಗೆ ಸ್ಮರಣ ಸಂಚಿಕೆ ನೀಡಿದ್ದು, ಒಂದು ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ಟರ ಜೊತೆಯಲ್ಲಿ ಇದ್ದಿದ್ದು ಕಳೆದ ವಾರದಲ್ಲಿ ಮುದ ನೀಡಿದ ವಿಶೇಷಗಳು. ವಿಷಯಗಳೊಂದಿಗೆ ಆಕೃತಿಗಳ ಸಂಯೋಜನೆ ಮಾಡಿ ಅನಂತ ಅನುಭವ ನೀಡುವ ಕಲಾವಿದರ ಬಗ್ಗೆ ಹೆಮ್ಮೆ ಎನಿಸುತ್ತದೆ.
–Ganapathi S Hegde