| ‘Ethos of a Rural Life’ ನೀವೂ ನೋಡಿ ಬನ್ನಿ |
• ಎಂಕೆಎಫ್ ಮ್ಯೂಸಿಯಂನಲ್ಲಿ
ಸತೀಶ್ ಮುಲ್ತಳ್ಳಿ ಕಲಾಕೃತಿಗಳ ಪ್ರದರ್ಶನ
ಮಣ್ಣು ಜೀವನದ ಕಣ್ಣು, ನೀರು ಇಲ್ಲದಿರೆ ಕಣ್ಣೀರು, ದೇಹ ಸುಡುವ ರಸಗೊಬ್ಬರ, ಮಳೆ ಬರದೇಹೋದರೆ ಸಿಗದು ಕೈಗೆ ಬೆಳೆ, ಎಷ್ಟೋ ಭಾರಿ ರೈತನ ಹೊಟ್ಟೆಗೇ ಸಿಗದ ಹಾಗೇ ಮಸಿಯಾಗಿ ಹೋಗುವುದು ದವಸ-ಧಾನ್ಯ, ಹಸಿರಾಗಿ ಇರಬೇಕಾದ ಜೀವನ ಮಸಿಯಾಗುವುದು… ರೈತನ ಬಾಳು, ಇವೆಲ್ಲ ನೋವುಂಡು ವರುಷದ ಹರುಷವ ಬಿಡಲಾರ ಮಣ್ಣಿನಮಗ!
ನೇಗಿಲಯೋಗಿಯ ಭಾವನೆಗಳನ್ನು ಇತಿಮಿತಿಯಲ್ಲಿ ಕಲಾವಿದ ಹಿತವಾಗಿ ರೇಖೆ, ಬಣ್ಣಗಳ್ಲಿ ಹೇಳಿದರೆ ಎಷ್ಟು ಚೆನ್ನ… ಹೌದೆನಿಸುವವರು ಈ ಕಲಾಪ್ರದರ್ಶನ ನೋಡಿ ಬನ್ನಿ. ಬೆಂಗಳೂರಿನ ಎಂಕೆಎಫ್ ಮ್ಯೂಸಿಯಂ ಗ್ಯಾಲರಿಯಲ್ಲಿ ಹಳ್ಳಿಹೈದ-ಕಲಾವಿದ, ಸಹೃದಯಿ ಸ್ನೇಹಿತ ಸತೀಶ್ ಮುಲ್ತಳ್ಳಿ ಅವರು ರಚಿಸಿರುವ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಅವರ ನಿತ್ಯ ಅನುಭವಗಳನ್ನೇ ಕಲಾಕೃತಿಗಳಿಗೆ ಅಭಿವ್ಯಕ್ತಿಯ ತೋರಣವಾಗಿಸಿದ್ದಾರೆ.
ಈ ಪ್ರದರ್ಶನವು ತಿಂಗಳಾಂತ್ಯಕ್ಕೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.
(ಈ ಪ್ರದರ್ಶನ ಕುರಿತ ಇನ್ನಷ್ಟು ಒಳನೋಟ ಈ ವಾರದ ‘ವಿಕ್ರಮ’ ವಾರಪತ್ರಿಕೆಯ ದೃಶ್ಯ ಅಂಕಣದಲ್ಲಿ…)
Courtesy :
#mkfmusium #artkarnataka #karnatakaart #ಅಗ್ನಿಪ್ರಪಂಚ #agniprapancha #indianartists