ಹಂಪೆ ಎಂಬ ಭೂಪ್ರದೇಶ ವಿಸ್ಮಯಗಳ ಆಗರ. ಬಗೆದಷ್ಟೂ ಕೌತುಕಗಳು. ಇಲ್ಲಿನ ನೈಸರ್ಗಿಕ ಬೃಹತ್ ಬಂಡೆ-ಬೆಟ್ಟಗಳು ಒಂದು ಬಗೆಯ ಕೌತುಕಗಳಾದರೆ, ಈ ಬಂಡೆಗಳನ್ನು ಮೇಣದಂತೆ ಕರಗಿಸಿ ಎರಕ ಹೊಯ್ದಿರುವರೋ! ಎಂಬಂತಹ ಸುಂದರ ಶಿಲ್ಪಗಳು, ದೇವಾಲಯಗಳು, ಕಂಬಗಳು, ಶಿಲಾಮಂಟಪಗಳು ಮತ್ತೊಂದು ಬಗೆಯ ಕೌತುಕಗಳು. ನಿಸರ್ಗ ನಿರ್ಮಿತ ಹಾಗೂ ಮಾನವ ನಿರ್ಮಿತ ಕಲೆಗಳೆರಡರ ಚಲುವು ಇಲ್ಲಿ ಮೇಳವಿಸಿದ್ದರಿಂದ ನನ್ನಂತಹ ಸಹಸ್ರಾರು ಕಲಾರಸಿಕರ ಸ್ವರ್ಗವೀಡು ಈ ಹಂಪೆ. ವಾರಕ್ಕೆ ಒಂದಾದರೂ ನೋಡಿರದ ಸ್ಥಳಗಳಿಗೆ ಹೋಗಿರುತ್ತೇನೆ. ಇಪ್ಪತ್ತು ವರ್ಷಗಳಿಂದ ಹಂಪೆಯಲ್ಲಿದ್ದರೂ ಹಂಪೆಯನ್ನು ನಾನು ನೋಡಿರುವುದು ಶೇ. ಮೂವತ್ತರಷ್ಟು ಮಾತ್ರವೇ ಎನ್ನಬಹುದು.ನಾನು ನಿಂತಿರುವ ಈ ಮಂಟಪ ಒಂದು ಪ್ರಾಚೀನ ಸ್ಥಲವಸ್ತು. ಎತ್ತರದ ಕಲ್ಬೆಟ್ಟದ ಮೇಲಿದೆ, ಒಳಗೊಂದು ನಂದಿಯ ಭಗ್ನ ಸುಂದರ ಶಿಲ್ಪವಿದೆ. ಸುತ್ತಲಿನ ನಿಸರ್ಗ ಮನೋಹರವಾಗಿದೆ. ಬಂಡೆಗಲ್ಲಿನ ಮೇಲೊಂದು ಅಪರೂಪದ ಮರ ಮಣ್ಣು ನೀರಿಲ್ಲದೆಯೂ ನಳನಳಿಸುತ್ತಿದೆ , ಇಂಥ ವಿಸ್ಮಯಗಳೂ ಇಲ್ಲಿವೆ.
–Shivanand Bantanur
Central University of Karnataka, kalaburagi, Music &Fine Art Department, Central University of Karnataka, ..(FB)