ಎಂ ಟಿ ವಿ ಆಚಾರ್ಯ
ಎಂ ಟಿ ವಿ ಆಚಾರ್ಯ ಎಂಬ ಹೆಸರು ಕಿವಿಗೆ ಬೀಳುತಿದ್ದಂತೆಯೇ ನೆನಪಿಗೆ ಬರುವುದು ಅವರು ಚಿತ್ರಿಸಿದ ಪೌರಾಣಿಕ
ಚಿತ್ರಗಳು, ಐವತ್ತರ ದಶಲ್ಲಿಕದ ಪ್ರಕಟವಾಗುತ್ತಿದ್ದ ಚಂದಮಾಮ, ಸಚಿತ್ರ ಮಾಸಪತ್ರಿಕೆಯಲ್ಲಿ ಮೂಡಿಬಂದ
ಚಿತ್ರಗಳು ಭಾರತಾದ್ಯಂತ ಓದುಗ ಪ್ರೇಮಿಗಳನ್ನು ಕಲಾ ಪ್ರೇಮಿಗಳನ್ನು ಆಕರ್ಷಿಸಿತ್ತು. ಚಂದಮಾಮ ಪತ್ರಿಕೆಗೆ
ಅಷ್ಟೊಂದು ಖ್ಯಾತಿ ಬರಲು ಎಂ ಟಿ ವಿ ಆಚಾರ್ಯರ ಪಾತ್ರ ಮಹತ್ತರವಾದದು ಎಂಬುದನ್ನು ಬೇರೆ
ಹೇಳಬೇಕಿಲ್ಲ. ಬಾರತದಲ್ಲಿ ವಿಷೇಶವಾಗಿ ಪೌರಾಣಿಕ ಚಿತ್ರಗಳನ್ನ ಚಿತ್ರಿಸಿ ಖ್ಯಾತಿ ಪಡೆದ ಕಲಾವಿದರಲ್ಲಿ ರಾಜ
ರವಿವರ್ಮ, ಎಸ್ ಎಂ ಪಂಡಿತ್ ನಂತರ ಕೇಳಿಬರುವ ಹೆಸರೇ ಎಂ ಟಿ ವಿ ಆಚಾರ್ಯ. ಮೂಲತ
ಮೈಸೂರಿನವರಾದ ಎಂ ಟಿ ವಿ ಆಚಾರ್ಯ ಬಾಲ್ಯದಿಂದಲು ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು ಪ್ರಕೃತಿಯ
ಮಡಿಲಲ್ಲಿ ಬೆಳೆದ ಇವರು ವೈ. ಸುಬ್ರಮಣ್ಯಂರಾಜು ಹಾಗು ಟಂಕಸಾಲೆಯವರ ಗರಡಿಯಲ್ಲಿ ವಿಶೇಷ
ಪರಿಣಿತಿಯನ್ನು ಪಡೆದರು. ಚಿತ್ರಕಲೆಯಲ್ಲಿಯೆ ಎನಾದರು ಸಾಧನೆ ಮಾಡಬೇಕು ಅಂದುಕೊಂಡು ತಮ್ಮ
ಅನುಭವಗಳನ್ನ ಚಿತ್ರಗಳ ಮುಖಾಂತರ ಕಾಗದದ ಮೇಲೆ ದಾಖಲಿಸುತಿದ್ದರು. ಮೈಸೂರಿನ ಚಾಮರಜೇಂದ್ರ
ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಲ್ಲಿ ಚಿತ್ರಕಲಾ ಅಬ್ಯಾಸ ಮಾಡಿದ ಇವರು ಚಿತ್ರಕಲೆ ಅಭ್ಯಸಿಸುವುದರೊಂದಿಗೆ
ಯೋಗಾಭ್ಯಾಸ, ಬರವಣಿಗೆಯಲ್ಲಿಯಲ್ಲಿಯು ಸಹ ಪರಿಣಿತಿಯನ್ನು ಗಳಿಸಿಕೊಂಡಿದ್ದರು. ಮನೆಯವರ ಒಪ್ಪಿಗೆ
ಇಲ್ಲದೆ ಚಿತ್ರಕಲೆ ಅಭ್ಯಸಿಸುತಿದ್ದ ಆಚಾರ್ಯರಿಗೆ ಚಿತ್ರಕಲೆಯಲ್ಲಿ ಸಾಧನೆ ಮಾಡುವುದು ಒಂದು ರೀತಿಯ
ಸವಾಲಾಗಿತ್ತು.
ಮೊದಲಿನಿಂದಲು ಸ್ವಾಭಿಮಾನಿಯಾಗಿದ್ದ ಆಚಾರ್ಯರು ಯಾರೊಬ್ಬರ ಆಶ್ರಯದಲ್ಲಿ ಇರಲು
ಇಚ್ಚಿಸುತಿರಲಿಲ್ಲ. ನಿರುದ್ಯೋಗಿಯಾಗಿದ್ದರು ಯಾರ ಬಳಿಯು ಏನನ್ನು ಕೇಳುತ್ತಿರಲಿಲ್ಲ.ಆ ಸಂದರ್ಬದಲ್ಲಿ ಕೆಲವು
ರೇಖಾಚಿತ್ರಗಳು, ಭಾವಚಿತ್ರಗಳು ಪ್ರಕೃತಿ ಚಿತ್ರಗಳು, ಹಾಗು ಕೆಲವು ಪೌರಾಣಿಕ ಚಿತ್ರಗಳನ್ನು ಚಿತ್ರಿಸಿಕೊಟ್ಟು
ಜೀವನ ನಡೆಸುತಿದ್ದರು ಅದಕ್ಕೆ ಪ್ರತಿಫಲವಾಗಿ ಕೆಲವರು ಹಣವನ್ನು ಕೊಟ್ಟರೆ ಕೆಲವರು ಹೊಗಳಿ ಬರಿಕೈಯಲ್ಲಿ
ಕಳುಹಿಸಿ ಕೊಡುತಿದ್ದರು. ಒಬ್ಬ ಕಲಾವಿದನಾಗಿ ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟ ಅನ್ನುವುವುದು
ಆಚಾರ್ಯರಿಗೆ ಅರ್ಥ ವಾಗತೊಡಗಿತ್ತು. ಕಲೆ ಮತ್ತು ಕಲಾವಿದನ ಅಗತ್ಯವೇ ಯಾರಿಗು ಇಲ್ಲದಿದ್ದಾಗ ಕಲೆಯನ್ನು
ನಂಬಿ ನಾನೇಕೆ ಜೀವನ ಹಾಳುಮಾಡಿಕೊಳ್ಳಲಿ ಎಂಬ ಪ್ರಶ್ನೆ ಕಾಡತೊಡಗಿತು. ಆದ್ಯಾತ್ಮಿಕ ಸಾಧನೆ ಕಲೆಯಲ್ಲಿನ
ಪಾಂಡಿತ್ಯ, ಅನ್ನದ ಸಮಸ್ಯೆಯ ಮುಂದೆ ನಿರರ್ಥಕವೆನಿಸಿತು. ನಾನು ಕಲಾವಿದನಾಗಬೇಕು ಅಂದುಕೊಂಡ ನಿರ್ಧಾರ
ತಪ್ಪು, ಯಾವುದಾದರು ಸಣ್ಣ ಕೆಲಸ ಸಿಕ್ಕರು ಕಲೆಗೆ ತಿಲಾಂಜಲಿ ಹೇಳಿಬಿಡೋಣ ಅನ್ನುವ ಸ್ಥಿತಿಗೆ ಬಂದು
ನಿಂತರು. ೧೯೪೨ ಎರಡನೇ ಜಾಗತಿಕ ಯುದ್ದ ನಡೆಯುತಿದ್ದ ಸಂದರ್ಭದಲ್ಲಿ ವಾಯುಪಡೆಯಲ್ಲಿ
ಪೋಟೋಗ್ರಾಪರ್ ಕೆಲಸ ದೊರೆತಿತ್ತು ಕೆಲವೆ ದಿನಗಳಲ್ಲಿ ಕೂಡಲೆ ಲಾಹೋರಿಗೆ ಹೋಗಬೇಕೆಂದು ಆದೇಶ
ಬಂದಿತು. ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಆಚಾರ್ಯರನ್ನು ತಾಯಿಯ ಕಣ್ಣಿರು ತಡೆದು ನಿಲ್ಲಿಸಿತು.
ಸಿಕ್ಕ ಹುದ್ದೆಯು ಕೈತಪ್ಪಿತು.
ಸ್ವಲ್ಪ ದಿನಗಳ ನಂತರ ಆಚಾರ್ಯರ ಸಂಪೂರ್ಣ ಪರಿವಾರ ಬೆಂಗಳೂರಿಗೆ ವರ್ಗಾವಣೆಯಾಯಿತು. ನಂತರ
ಟ್ರೇಸರ್ ಆಗಿ ವಿಮಾನ ಕಾರ್ಖಾನೆಯಲ್ಲಿ (HAL) ಕೆಲಸ ಸಿಕ್ಕಿತು ಆ ಕಾರ್ಖಾನೆಯಲ್ಲಿ ಸಾಕಷ್ಟು ಜನ ಕೆಲಸ
ಮಾಡುತಿದ್ದರು. ಅಲ್ಲಿ ಕಾರ್ಯ ನಿರ್ವಹಿಸುತಿದ್ದ ಕೆಲವು ಅಧಿಕಾರಿಗಳಿಗೆ ಯಾರಿಂದಲೋ ಆಚಾರ್ಯರು
ಚಿತ್ರಕಲಾವಿದರೆಂದು ಗೊತ್ತಾಗಿ ಅವರ ಚಿತ್ರಗಳನ್ನು ನೋಡಲು ಬಯಸಿ ಅವರ ಚಿಕ್ಕ ರೂಮಿಗೆ ಬಂದರು.
ಗಂಟುಕಟ್ಟಿ ಮೇಲೆ ಇಟ್ಟಿದ್ದ ಚಿತ್ರಗಳನ್ನು ಬಿಚ್ಚಿ ತೋರಿಸಿದಾಗ ಬಹಳ ಮೆಚ್ಚುಗೆಯಿಂದ ಸುಮಾರು
ಇಪ್ಪತ್ತು ಚಿತ್ರಗಳನ್ನು ಕರಿದಿಸಿ ಇನ್ನೂರು ರುಪಾಯಿಗಳನ್ನು ಕೊಟ್ಟುರು. ನಂತರ ಆಚಾರ್ಯರನ್ನು ಕರೆದು ದಕ್ಷಿಣ
ಭಾರತ ಪ್ರವಾಸ ಮಾಡಿ ಅಲ್ಲಿನ ದೃಶ್ಯಗಳನ್ನು ಚಿತ್ರಿಸಿಕೊಂಡು ಬನ್ನಿ, ನೀವು ನಮ್ಮ ಅಮೆರಿಕದಲ್ಲಿನ ಶ್ರೇಷ್ಟ
ಕಲಾವಿದರಿಗೆ ಸಮಾನರು ಎಂದು ಹೊಗಳಿದರು. ಅದಕ್ಕಾಗಿ ವೈದ್ಯರಿಂದ ಸುಳ್ಳು ಪ್ರಮಾಣಪತ್ರವನ್ನು ಪಡೆದು
ದೀರ್ಘ ರಜೆ ಪಡೆದು ಪ್ರವಾಸಕ್ಕೆ ಹೊರಟರು. ನಂತರ ಅಮೆರಿಕದ ಜನರಿಗೂ ಬೇಟಿಯಾಗಲಿಲ್ಲ ಮರಳಿ ನೌಕರಿಗೂಸೇರಲಿಲ್ಲ. ಮತ್ತೆ ವಿದಿಯ ಸುಳಿಯಲ್ಲಿ ಮತ್ತೆ ಸಿಲುಕುವಂತಾಯಿತು. ಕೆಲಸದಿಂದ ಬಿಡುಗಡೆ ಪಡೆದನಂತರ
ಸ್ವತಂತ್ರ ಪಕ್ಷಿಯಂತೆ ತಮಗೆ ಇಷ್ಟವೆನಿಸಿದ ಮನಸ್ಸಿಗೆ ತೃಪ್ತಿ ನೀಡುವಂತ ಹಲವು ಕೃತಿಗಳನ್ನು ರಚಿಸಿದರು.
ಮೇಲು ಕೋಟೆಯ ನಂಟು ಮದ್ರಾಸಿಗೆ ಗಂಟು.
ದಕ್ಷಿಣ ಭಾರತ ಪ್ರವಾಸದ ನಂತರ ಆಚಾರ್ಯರು ಮೇಲುಕೋಟೆಯಲ್ಲಿ ಸುಮಾರು ತಿಂಗಳು ಕಾಲ ಇದ್ದು ಅನೇಕ ನಿಸರ್ಗ
ಚಿತ್ರಗಳನ್ನು ರಚಿಸಿದರು ಕೆಲವು ಸ್ನೇಹಿತರ ಆಪೇಕ್ಷೆಯ ಮೇರೆಗೆ ತಿರುನಾರಾಯಣ ಚಿತ್ರ ಬರೆಯಲು ಮುಂದಾದರು. ಅಲ್ಲಿ
ಛಾಯಚಿತ್ರ ತೆಗೆಯಲು ರೇಖಾಚಿತ್ರ ಬರೆಯಲು ಅವಕಾಶವಿರಲಿಲ್ಲ ಬಹಳಷ್ಟು ಹೊತ್ತು ದೇವರ ಅಲಂಕಾರವನ್ನು ಗಮನಿಸಿ ಜಲವರ್ಣದಲ್ಲಿ ಚಿತ್ರವನ್ನು ಬರೆದು ಮುಗಿಸುತ್ತಾರೆ. ಆಗಿನ ಮೈಸೂರು ರಾಜ್ಯದ ಸಚಿವರೊಬ್ಬರು ಚಿತ್ರವನ್ನು
ಮುದ್ರಿಸುವುದಾಗಿ ಬರವಸೆ ನೀಡಿ ತಮ್ಮೊಂದಿಗೆ ತೆಗೆದುಕೊಂಡು ಹೋದರು ಅದಾಗಿ ಬಹಳ ದಿನಗಳ ನಂತರ ಚಿತ್ರವನ್ನು ಹುಡುಕುತ್ತ ಹೊರಟಾಗ ಅದು ಆ ಸಚಿವರ ಆಪ್ತ ಕಾರ್ಯದರ್ಶಿಗಳ ಮನೆಯನ್ನು ಅಲಂಕರಿಸಿ ನಂತರ ಆಗಿನ ಸರ್ಕಾರದ ನ್ಯಾಯಂಗ ಇಲಾಖೆಯ ಕಾರ್ಯದರ್ಶಿಗಳ ಕೈಸೇರಿತ್ತು.
ಅವರನ್ನು ಬೇಟಿಯಾದ ಆಚಾರ್ಯರಿಗೆ ಅದರ ಪ್ರತಿಕೃತಿಯನ್ನು ಮಾಡಿಕೊಟ್ಟು ಮೂಲ ಕೃತಿಯನ್ನು ತಾವು
ತೆಗೆದುಕೊಂಡು ಹೋಗಬಹುದು ಎನ್ನುವ ಬರವಸೆ ದೊರೆಯುತ್ತದೆ. ಅದರಂತೆಯೆ ನಡೆದುಕೊಂಡ ಆಚಾರ್ಯರ
ಪ್ರತಿಭೆ ಮತ್ತು ಗುಣವನ್ನು ಗಮನಿಸಿದ ಅವರು, ನಿನಗೆ ನನ್ನಿಂದ ಏನಾದರು ಸಹಾಯ ಬೇಕಾದರೆ ಕೇಳು
ಅನ್ನುತ್ತಾರೆ. ನಿರುದ್ಯೊಗಿಯಾದ ನನಗೆ ಏನಾದರು ಕೆಲಸ ಕೊಡಿಸಿ ಅಂದಾಗ, ನನ್ನ ಕೈಯಲ್ಲಿ ಪೋಲಿಸ್ ಇಲಾಖೆ
ಇರುವುದರಿಂದ ನಿನಗೆ ಪೋಲಿಸ್ ಕೆಲಸ ಕೊಡಿಸಬಲ್ಲೆ ಅನ್ನುತ್ತಾರೆ. ಅಚಾರ್ಯರು ಪೋಲಿಸ್ ಕೆಲಸ ಮಾಡಲು
ಒಪ್ಪಿಕೊಳ್ಳುತ್ತಾರೆ. ಅಚಾರ್ಯರ ಪ್ರತೆಭೆಯನ್ನು ಕಣ್ಣಾರೆ ಕಂಡ ಅವರು ಖ್ಯಾತ ವಕೀಲರಾದ ಶ್ರೀ ಎಸ್. ಕೆ.
ಅಯ್ಯಂಗಾರರ ಹತ್ತಿರ ಕರೆದುಕೊಂಡು ಹೋಗುತ್ತಾರೆ. ಅಯ್ಯಂಗಾರರು ತಮ್ಮ ಸಂಬಂಧಿಕರ ಮದುವೆಗೆ ಒಂದು
ಗ್ರೀಟಿಂಗ್ ಕಾರ್ಡ್ ಮಾಡಿಕೊಡಲು ಹೇಳುತ್ತಾರೆ. ಆಚಾರ್ಯರು ರಚಿಸಿಕೊಟ್ಟ ಗ್ರೀಟಿಂಗ್ ಕಾರ್ಡ್ ನೋಡಿ
ನೀನೊಬ್ಬ ಉತ್ತಮ ಕಲಾವಿದ ನಿನ್ನ ಪ್ರತಿಭೆಗೆ ಸೂಕ್ತವಾದ ಮಹತ್ವ ಸಿಗಬೇಕಾದರೆ ನೀನು ಮದ್ರಾಸಿಗೆ ಬಾ ಎಂದು
ಆಹ್ವಾನ ಕೊಟ್ಟು ತಮ್ಮ ಜೊತೆಯಲ್ಲಿಯೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಇರಿಸಿಕೊಂಡು ಚಿತ್ರ
ಬರೆಯಲು ಅನುಕೂಲ ಮಾಡಿಕೊ ತ್ತಾರೆ. ನಂತರ ಆ ಚಿತ್ರಗಳನ್ನ ಪ್ರದರ್ಶನ ಮಾಡಿಸುವ ವ್ಯವಸ್ಥೆ ಮಾಡಿಸುತ್ತಾರೆ
ಸುಮಾರು ನೂರು ಚಿತ್ರಗಳು ಪ್ರದರ್ಶನಕ್ಕೆ ತಯ್ಯಾರಾದವು ಉದ್ಘಾಟಣೆಗಾಗಿ ಆಗಿನ ಹೈಕೋರ್ಟಿನ
ನ್ಯಾಯದೀಶರಾದ ಶ್ರೀ ಪಿ ವಿ ರಾಜ್ಮನ್ನಾರ್ ಅವರನ್ನು ಕರೆಸುತ್ತಾರೆ. ಇದಕ್ಕಿಂತಲು ಮೊದಲು ಮದ್ರಾಸ್ ನಲ್ಲಿ
ಕರ್ನಾಟಕದ ಯಾವ ಕಲಾವಿದರ ಪ್ರದರ್ಶನವು ನಡೆದ ಇತಿಹಾಸವಿಲ್ಲ ಎನ್ನುವ ಮಾತನ್ನು ಸ್ವತ ಆಚಾರ್ಯರೆ
ಹೇಳುತ್ತಾರೆ. ಆ ಪ್ರದರ್ಶನದಲ್ಲಿನ ಸುಮಾರು ಕಲಾಕೃತಿಗಳು ಮಾರಾಟವಾದವು. ಪತ್ರಿಕಾಮಾಧ್ಯಮದವರು ಸಹ
ಬಹಳ ಹಾಡಿ ಹೊಗಳಿದ್ದರು. ಈ ಸುದ್ದಿ ಕರ್ನಾಟಕದಲ್ಲೂ ಸಹ ಹರಡಿಯಾಗಿತ್ತು. ಆಗಿನ ಸಮಯದ
ಕರ್ನಾಟಕದ ಶ್ರೇಷ್ಟ ಕಲಾವಿದ ವೆಂಕಟಪ್ಪನವರು ಸಹ ಹರ್ಷವ್ಯಕ್ತಪಡಿಸಿದ್ದರು. ಚಿತ್ರಗಳು ಮಾರಾಟವಾಗಿ ಸ್ವಲ್ಪ
ದುಡ್ಡು ಕೈಯಲ್ಲಿ ಬಂದಾಗ ಯಾವ ಚಿಂತೆಯು ಇಲ್ಲದೆ ಇನ್ನು ಹಲವಾರು ಕೃತಿಯನ್ನು ರಚಿಸಿದರು. ಕೈಯಲ್ಲಿ
ಸ್ವಲ್ಪ ಮಟ್ಟಿನ ಹಣ ಬಂದಾಗ ಕಲಾವಿದನಿಗೆ ಜೀವನದ ಉತ್ಸಾಹ ದ್ವಿಗುಣವಾಗುತ್ತದೆ. ಬಂದ ದುಡ್ಡಿನಿಂದ
ಉತ್ತಮವಾದ ಪೇಪರ್ ಗಳು ಕುಂಚಗಳು ಮತ್ತು ಬಣ್ಣಗಳನ್ನ ಖರೀದಿಸಿ ಮನಸ್ಸಿನಲ್ಲಿ ಬಹುದಿನದಿಂದ
ಕೊರೆಯುತಿದ್ದ ಹಲವಾರು ಚಿತ್ರಗಳನ್ನು ಬಿಡಿಸಿದರು. ಈ ಸಂದರ್ಭದಲ್ಲಿ ನಿರ್ಮಾಣವಾದ ಕೃತಿಗಳು ಬಹಳಷ್ಟು
ಜನಪ್ರಿಯತೆ ತಂದುಕೊಟ್ಟವು ಅಂದು ಮೈಸೂರಿನ ಸಾಂಪ್ರದಾಯಿಕ ಕಲೆಯನ್ನು ಕರಗತ ಮಾಡಿಕೊಂಡಿದ್ದ
ಆಚಾರ್ಯರು ತಮ್ಮ ಕಲಾಕೃತಿಗಳನ್ನು ಮೈಸೂರು ಶೈಲಿಯಲ್ಲಿಯೆ ರಚಿಸಿದರು. ಅಚಾರ್ಯರು ಯಾವತ್ತು
ಶೈಲಿಯ ಹಿಂದೆ ಬಿದ್ದವರಲ್ಲ. ಅಚಾರ್ಯರು ಶೈಲಿಕಿಂತ ಹೇಳಬೇಕಾದ ವಿಷಯ ಮುಖ್ಯ ಅಂದುಕೊಂಡಿದ್ದರು.
ಕಾಲ ಕಳೆದಂತೆ ಇವರ ಚಿತ್ರಗಳು ನೋಡಿದತಕ್ಷಣ ಇವು ಆಚಾರ್ಯರ ಚಿತ್ರಗಳೆ ಎಂದು ಗುತಿಸುವ ಮಟ್ಟಿಗೆ
ಶೈಲಿಕ್ರುತವಾಗಿ ಗುರುತಿಸಿಕೊಂಡವು. ಮಾಜಿ ನ್ಯಾಯಧೀಶರ ಮನೆಯಲ್ಲಿ ವಾಸವಿದ್ದ ಆಚಾರ್ಯರರಿಗೆ ಯಾಕೋ ಸ್ವತಂತ್ರವಾಗಿ ಇರಬೇಕೆನಿಸಿತು. ನ್ಯಾಯಧೀಶರ ಅನುಮತಿ ಪಡೆದು ಮದ್ರಾಸಿನಲ್ಲಿದ್ದ ಹಲವು ಕನ್ನಡಿಗ ಸ್ನೇಹಿತರೊಂದಿಗೆ ಇರಲು ಶುರುಮಾಡಿದರು. ಅಷ್ಟೊತ್ತಿಗೆಗಾಗಲೆ ಮದ್ರಾಸಿನಲ್ಲಿ ಆಚಾರ್ಯರ ಕಲಾಕೃತಿಗಳ ಪರಿಚಯ ಹೆಚ್ಚಾಗಿ, ಅನೇಕ
ಕಡೆಗಳಲ್ಲಿ ಅವರ ಕಲಾಕೃತಿಗಳ ಪ್ರದರ್ಶನ ನಡೆಯುತಿದ್ದವು. ೧೯೪೬ ರಲ್ಲಿ ಕಲ್ಕತ್ತೆಯ ಅಕಾಡಮಿ ಆಫ್ ಪೈನ್
ಆರ್ಟ್ ಸಂಸ್ಥೆಯು ನದೆಸುತಿದ್ದ ಪ್ರದರ್ಶನಕ್ಕೆ ಆಚಾರ್ಯರ ಆರು (೬) ಕಲಾಕೃತಿಗಳು ಆಯ್ಕೆಗೊಂಡಿದ್ದವು.
ಆಚಾರ್ಯರು ಆ ಪ್ರದರ್ಶನವನ್ನು ನೋಡಬೇಕೆಂದು ಕಲ್ಕತ್ತೆಗೆ ಹೊರಟರು. ಅಲ್ಲಿ ಪ್ರದರ್ಶನಕ್ಕೆ ಇರಿಸಿದ್ದ
ಅನೇಕಉತ್ತಮ ಕಲಾಕೃತಿಗಳನ್ನು ನೋಡಿ ತೃಪ್ತಿ ಪಟ್ಟುಕೊಂಡರು.ಕಲ್ಕತ್ತೆ ಮತ್ತು ಶಾಂತಿನಿಕೇತನದಲ್ಲಿನ ಹಲವು ಹಿರಿಯ ಕಲಾವಿದರೊಂದಿಗೆ ಚರ್ಚಿಸಿ ಸುಮಾರು ಹೊಸ ವಿಚಾರಗಳನ್ನು ತಿಳಿದುಕೊಂಡರು.
೧೯೪೬ ರಲ್ಲಿ ಇಂಡಿಯನ್ ಇನ್ಸ್ಟಿಟ್ಯುಟ್ ಅಫ್ ಪೈನ್ ಆರ್ಟ್ಸ್ ಸಂಸ್ಥೆಯು ಒಂದು ಬ್ರಹತ್ ಕಲಾ ಪ್ರದರ್ಶನದ
ಯೋಜನೆಯನ್ನು ರೂಪಿಸಿತು ಅದರ ನಿರ್ವಹಣ ಜವಾಬ್ದಾರಿಯನ್ನು ಆಚಾರ್ಯರಿಗೆ ವಹಿಸಿತು. ಅಚಾರ್ಯರು
ಕರ್ನಾಟಕದಿಂದ ಸುಮಾರು ಐವತ್ತು ಜನ ಕಲಾವಿದರ ಕಲಾಕೃತಿಗಳನ್ನು ತರಿಸಿ, ತಮಿಳುನಾಡಿನ ಐವತ್ತು ಜನ
ಕಲಾವಿದರೊಂಒದಿಗೆ ಪ್ರದರ್ಶನ ಮಾಡಿಸಿದರು.
ಚಂದಮಾಮ ಕಲಾವಿದ
ಮದ್ರಾಸಿನಲ್ಲಿ ಆಗಿನ ಖ್ಯಾತ ಚಲನಚಿತ್ರ ನಿರ್ಮಾಪಕ ನಾಗಿರೆಡ್ಡಿಯವರು ಚಕ್ರಪಾಣಿ ಎಂಬ ಲೇಖಕರೊಂದಿಗೆ
ಚಂದಮಾಮ ಎಂಬ ಮಕ್ಕಳ ಸಚಿತ್ರ ಮಾಸ ಪತ್ರಿಕೆಯನ್ನು ಹೊರಡಿಸುವ ಚಿಂತನೆಯಲ್ಲಿದ್ದರು. ಅದಕ್ಕಾಗಿ
ಉತ್ತಮ ಕಲಾವಿದರ ಹುಡುಕಾಟದಲ್ಲಿದ್ದರು. ಕರ್ನಾಟಕದ ಕಲಾವಿದರಾದ ರುಮಾಲೆ ಚನ್ನಬಸವಯ್ಯನವರು ಕೆಲಸದ
ಮೇಲೆ ಮದ್ರಾಸಿಗೆ ಬಂದಾಗಲೆಲ್ಲ ಆಚಾರ್ಯರ ಮನೆಯಲ್ಲೇ ತಂಗುತಿದ್ದರು. ಅವರಿಗೆ ನಾಗಿರೆಡ್ಡಿಯವರ ಪರಿಚಯ
ಇದ್ದುದರಿಂದ ಆಚಾರ್ಯರನ್ನು ಅವರ ಬಳಿಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು.ಆಚಾರ್ಯರ
ಚಿತ್ರಗಳನ್ನು ನೋಡಿ ಮೆಚ್ಚಿಕೊಂಡ ನಾಗಿರೆಡ್ಡಿಯವರು ಚಂದಮಾಮ ಪತ್ರಿಕೆಯಲ್ಲಿ ಕಲಾವಿದರನ್ನಾಗಿ
ನೇಮಿಸಿಕೊಂಡರು. ಅಂದಿನಿಂದ ಶುರುವಾದ ಪೌರಾಣಿಕ ಚಿತ್ರಗಳ ಸೃಷ್ಟಿ ಸುಮಾರು ವರ್ಷಗಳ ಕಾಲ ನಡೆಯಿತು.
ಬಾಲ್ಯದಿಂದಲು ಚಿತ್ರಿಸಬೇಕು ಅಂದುಕೊಂಡಿದ್ದ ಮಹಾಭಾರತ ಸರಣಿ ಚಿತ್ರಗಳ ನಿರ್ಮಾಣಕ್ಕೆ ದೇವರೇ ನನ್ನನ್ನು
ನಾಗಿರೆಡ್ಡಿಯವರ ಬಳಿಗೆ ಕಳುಹಿಸಿರಬೇಕು ಅನ್ನುತ್ತಿದ್ದ ಆಚಾರ್ಯರು ಚಿತ್ರಕಲೆಯನ್ನ ಸಂಪೂರ್ಣವಾಗಿ
ಆನಂದಿಸಿದವರು. ಇವರ ಮುಖಪುಟ ಚಿತ್ರಗಳನ್ನು ನೋಡಲು ಜನ ಕಾಯುತಿದ್ದರು. ಹಿರಿಯ ನಿವ್ರತ್ತ ಐ ಎ
ಎಸ್ ಅಧಿಕಾರಿಗಳಾದ ಶ್ರೀ ಚಿರಂಜೀವಿ ಸಿಂಗ್ ರವರು ಹೇಳುವಂತೆ, ನಾವು ಚಂದಮಾಮ ಪತ್ರಿಕೆಯನ್ನು ಓದುತ್ತಾ
ಬೆಳೆದಿದ್ದೇವೆ ಅನ್ನುತ್ತಾರೆ.
ಆಚಾರ್ಯರು ಚಿತ್ರಕಲಾವಿದರಷ್ಟೇ ಆಗಿರದೆ ಕನ್ನಡ ಚಂದಮಾಮ ಪತ್ರಿಕೆಯ ಸಂಪಾದಕರಾಗಿಯು ಕಾರ್ಯ
ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಕರ್ನಾಟಕಕ್ಕೆ ಮರಳಿ ಬಂದವರು. ಕರ್ನಾಟಕಕ್ಕೆ ಬಂದ ಆಚಾರ್ಯರು ಕೆಲವು
ಪತ್ರಿಕೆಗಳಿಗೆ ವಿಮರ್ಶಾ ಲೇಖನಗಳನ್ನು ಬರೆದರು. ಮದ್ರಾಸಿನಿಂದ ತಮ್ಮ ಪ್ರಮುಖ ಚಿತ್ರಗಳನ್ನು ತರಿಸಿಕೊಂಡು
ಕರ್ನಾಟಕದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಿದರು. ಪ್ರದರ್ಶನ ನೋಡಿದ ಸಾಕಷ್ಟು ಜನ ಆಚಾರ್ಯರ
ಶಿಷ್ಯರಾದರು. ಕೆಲವು ಜನ ಕಲಾ ಆಸಕ್ತರಿಗೆ ಚಿತ್ರಕಲೆಯನ್ನು ಕಲಿಯಬೇಕು ಅನ್ನುವ ಆಸೆಗಳಿದ್ದರು ತಮ್ಮ
ಊರುಬಿಟ್ಟು ಹೋಗಿ ಕಲಾಶಿಕ್ಷಣ ಪಡೆಯಲು ಆಗುತ್ತಿರಲಿಲ್ಲ. ಶಿಷ್ಯರ ಆಪೇಕ್ಷೆಯ ಮೇರೆಗೆ ಚಿತ್ರ ಕಲೆಯನ್ನ
ದೂರ ಶಿಕ್ಷಣದ ಮುಖಾಂತರ ಕಲಿಸುವ ಯೋಜನೆಯನ್ನು ಹಾಕಿಕೊಂಡರು. ಇದರಿಂದಾಗಿ ಆಚಾರ್ಯರರಿಗೆ
ಭಾರತಾದ್ಯಂತ ಶಿಷ್ಯ ಸಮೂಹ ಹುಟ್ಟಿಕೊಂಡಿತು. ಚಿತ್ರಕಲಾ ಶಿಕ್ಷಣ ಮತ್ತು ಚಿತ್ರಕಲಾ ಶೃಷ್ಟಿಯಲ್ಲಿಯೇ
ಸಂಪೂರ್ಣ ಜೀವನವನ್ನು ಮುಡುಪಾಗಿಡಬೇಕಾಯಿತು. ಕಲಾತಪಸ್ವಿ ಆಚಾರ್ಯರರಿಗೆ ೨೦೨೦ ಕ್ಕೆ ನೂರು ವರ್ಷ
ತುಂಬುತ್ತದೆ.
ಯುರೋಪಿಯನ್ ಕಲಾವಿದರ ಹಾದಿಯನ್ನು ತುಳಿಯುತ್ತಿರುವ ನಮ್ಮ ಮಾಡರ್ನ್ ಕಲಾವಿದರ ವಿಪರೀತ
ಹಾವಳಿಯಿಂದ ನಲುಗಿದ ನಮ್ಮ ಹಿರಿಯ ಕಲಾವಿದರ ಆತ್ಮಗಳಿಗೆ ಶಾಂತಿಸಿಗಬೇಕಾದರೆ ಅವರ ಕಲಾಕೃತಿಗಳನ್ನು
ಕಣ್ತುಂಬ ನೋಡಬೇಕು, ಸವಿಯಬೇಕು ಅವರನ್ನು ಸ್ಮರಿಸಬೇಕು. ಆವಾಗಲೇ ನಾವು ಭಾರತೀಯ ಕಲಾ
ಮೌಲ್ಯವನ್ನು ಉಳಿಸಿಕೊಂಡಂತಾಗುತ್ತದೆ.
ಲೇಖಕರು
. ಶಿವಾನಂದ ಬಸವಂತಪ್ಪ