Live Stream

[ytplayer id=’22727′]

| Latest Version 8.0.1 |

State News

ಮಂಜುನಾಥ್ ಕೆ. ಭಂಡಾರೆ– Manjunath K Bhandare

ಮಂಜುನಾಥ್ ಕೆ. ಭಂಡಾರೆ– Manjunath K Bhandare

ಮಂಜುನಾಥ್ ಕೆ. ಭಂಡಾರೆ ನಮ್ಮ ನಾಡಿನ ಹೆಸರಾಂತ ಚಿತ್ರಕಾರರಲ್ಲಿ ಒಬ್ಬರು.
ಸೆಪ್ಟೆಂಬರ್ 9 ಮಂಜುನಾಥ್ ಕೆ. ಭಂಡಾರೆ ಅವರ ಜನ್ಮದಿನ. ಮೂಲತಃ ಹುಬ್ಬಳ್ಳಿಯವರಾದ ಮಂಜುನಾಥ್ ಅವರು ಹುಬ್ಬಳ್ಳಿಯ ವಿಜಯ ಮಹಾಂತೇಶ ಫೈನ್ ಆರ್ಟ್ ಕಾಲೇಜಿನಿಂದ ಆರ್ಟ್ ಮಾಸ್ಟರ್ ಡಿಪ್ಲೋಮಾ ಮತ್ತು ಗ್ರಾಜುಯೇಟ್ ಡಿಪ್ಲೋಮಾ ಪದವಿಗಳನ್ನು ಗಳಿಸಿದ್ದಾರೆ. ಮಂಜುನಾಥ್ ಭಂಡಾರೆ ಅವರು ರಾಜ್ಯಾದ್ಯಂತ ತಮ್ಮದೇ ಸೋಲೋ ಕಲಾ ಪ್ರದರ್ಶನ ಮತ್ತು ಸಾಮೂಹಿಕ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು ಕಲಾ ವಿಮರ್ಶಕರಿಂದ, ಕಲಾಭಿಮಾನಿಗಳಿಂದ ಮತ್ತು ಮಾಧ್ಯಮಗಳಿಂದ ಅಪಾರ ಮೆಚ್ಚುಗೆ ಮತ್ತು ಮನ್ನಣೆಗಳಿಗೆ ಪಾತ್ರರಾಗಿದ್ದಾರೆ. ಇದರಲ್ಲಿ ಅನೇಕ ರಾಷ್ಟ್ರಮಟ್ಟದ ಕಲಾ ಪ್ರದರ್ಶನಗಳೂ ಸೇರಿವೆ.

ಮಂಜುನಾಥ್ ಅವರಿಗೆ ಶ್ರೇಷ್ಠ ಚಿತ್ರ ರಚನೆಗಾಗಿ ಪ್ರತಿಷ್ಠಿತ ಎಚ್ಡಿಎಮ್ಸಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಮಂಜುನಾಥ್ ಭಂಡಾರೆ ಅವರು ತಮ್ಮ ವೃತ್ತಿಪರತೆಗೆ ಹೆಸರಾಗಿರುವ ಹಾಗೆಯೇ ರಾಜ್ಯದೆಲ್ಲೆಡೆ ಕಲಾ ಕ್ಯಾಂಪ್ ಮತ್ತು ಕಲಾ ಕಾರ್ಯಾಗಾರಗಳನ್ನು ನಡೆಸಿ ಕಲೆಯ ಬೆಳವಣಿಗೆಗೆ ನೀಡುತ್ತಿರುವ ವ್ಯಾಪ್ತತೆಗೂ ಹೆಸರಾಗಿದ್ದಾರೆ.
ಮಂಜುನಾಥ್ ಭಂಡಾರೆ ಅವರ ಕಲೆ ಮತ್ತು ಸಂಘಟನಾ ಸಾಮರ್ಥ್ಯದ ಕುರಿತಾಗಿ ಪತ್ರಿಕೆಗಳು ನಿರಂತರ ಸುದ್ಧಿ ಬಿತ್ತರಿಸುತ್ತ ಬಂದಿವೆ. ನಿರಂತರ ಕಲಾಭಿವ್ಯಕ್ತಿಯಲ್ಲಿ ಮತ್ತು ಕಲಾಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆತ್ಮೀಯ ಮಂಜುನಾಥ್ ಭಂಡಾರೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. Courtesy :  ಕನ್ನಡ ಸಂಪದ Kannada Sampada.


Vishwanath Guggari
";