ರಾಷ್ಟ್ರ ಮಟ್ಟದ ಚಿತ್ರಕಲಾ ಪ್ರದರ್ಶನ-2025 ಹುಬ್ಬ ಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ನೂತನ ಕಲಾಗ್ಯಾಲರಿಯಲ್ಲಿ ರಾಷ್ಟ್ರ ಮಟ್ಟದ ಚಿತ್ರಕಲಾ ಪ್ರದರ್ಶನವನ್ನು ದೇಶದ ಹೆಸರಾಂತ ಕಲಾವಿದರ ಸುಮಾರು 60 ಕಲಾಕೃತಿಗಳನ್ನು ದಿನಾಂಕ 28-06-2025 ರಂದು ಮುಂಜಾನೆ 11 ಗಂಟೆಗೆ ಉದ್ಗಾಟನೆಗೊಳ್ಳ ಲಿದೆ. ಒಂದು ತಿಂಗಳ ಕಾಲದವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದ್ದು ಕರ್ನಾಟಕ ಕಲಾವಿದರು ಇದರ ಪ್ರಯೋಜನೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಈ ರಾಷ್ಟ್ರ ಮಟ್ಟದ ಕಲಾ ಪ್ರದರ್ಶನವನ್ನು ರಾಜ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ,ಕುಮಾರ ಉದ್ಘಾಟನೆಯನ್ನು ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಹೆಸರಾಂತ ಉದ್ಯಮಿಗಳಾದ ಡಾ. ಚಿ. ವಿಎಸ್ ವಿ ಪ್ರಸಾದ್. ಎಂ.ಡಿ. ,ಸ್ವರ್ಣ ಸಮೂಹ ಸಂಸ್ಥೆಯ ಮಾಲಿಕರು ಹಾಗೂ ಅತಿಥಿಗಳಾಗಿ ಶ್ರೀ ಶ್ರೀನಿವಾಸ ಶಾಸ್ತ್ರೀ, ಸಂಚಾಲಕರು. ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಧಾರವಾಡ. ಘನ ಅಧ್ಯಕ್ಷತೆಯನ್ನು ಶ್ರೀ ಶಶಿ ಸಾಲಿ ಗೌರವ ನಿರ್ದೇಶಕರು, ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘ ಹುಬ್ಬಳ್ಳಿ ಇವರು ಪಾಲ್ಗೊಳ್ಳಲಿದ್ದಾರೆ. ಈ ಕಲಾಪ್ರದರ್ಶನದಲ್ಲಿ ದೇಶದ ಹೆಸರಾಂತ ಕಲಾವಿದರಾದ ಡಾ.ಎಂ ವಿ ಮಿಣಜಗಿ- ಕರ್ನಾಟಕ, ಡಾ ಡಿ ವಿ ಹಾಲಭಾವಿ –ಕರ್ನಾಟಕ, ವಾಸುದೇವ ಕಾಮತ್- ಮಹಾರಾಷ್ಟ್ರ ಪಿ ಸಂಪತ್ ಕುಮಾರ್-ಕರ್ನಾಟಕ, ಜೆಎಂಎಸ್ ಮಣಿ-ಕರ್ನಾಟಕ, ಡಾ ಜೆ ಎಸ್ ಖಂಡೇರಾವ್-ಕರ್ನಾಟಕ, ಎಂ ಆರ್ ಬಾಳಿಕಾಯಿ-ಕರ್ನಾಟಕ, ಎಂ.ಸಿ.ಚೆಟ್ಟಿ-ಕರ್ನಾಟಕ,ಅಶೋಕ್ ಅಕ್ಕಿ- ಕರ್ನಾಟಕ, ರಾಮಚಂದ್ರ ಬಿ ಗರಗ- ಕರ್ನಾಟಕ, ಪರಾಗ್ ಬೋರ್ಸೆ-ಮಹಾರಾಷ್ಟ್ರ,,ಜಿ ಎಸ್ ಮಜಗಾಂವಕರ್ ಮಹಾರಾಷ್ಟ್ರಡಾ.ಬಾಬುರಾವ್ ನಡೋಣಿ-ಕರ್ನಾಟಕ, ಪ್ರಫುಲ್ ಸಾವಂತ್- ಮಹಾರಾಷ್ಟ್ರಎಸ್ ಈಳಯರಾಜ- ತಮಿಳುನಾಡು ಡಾ ಸಿ ಡಿ ಜಟ್ಟೆಣ್ಣವರ್ -ಕರ್ನಾಟಕ* ದಯಾನಂದ ಕಾಮಕರ್- ಕರ್ನಾಟಕ* ಆದಿತ್ಯ ಚಾರಿ- ಮಹಾರಾಷ್ಟ್ರ* ಎಫ್ ವಿ ಚಿಕ್ಕಮಠ-ಕರ್ನಾಟಕ* ಡಾ ಪಿ ಆರ್ ಬಹುರೂಪಿ- ಕರ್ನಾಟಕ* ಲಿಂಗರಾಜ್ ಬೆಲ್ಲದ್-ಕರ್ನಾಟಕ* ಕರಿಯಪ್ಪ ಎಚ್ ಹಂಚಿನಮನಿ.- ಕರ್ನಾಟಕ* ಬಿ.ಮಾರುತಿ-ಕರ್ನಾಟಕ, ವಿಜಯ್ ಅಚ್ರೇಕರ್- ಮಹಾರಾಷ್ಟ್ರ* ರಾಮಚಂದ್ರ ಖರತ್ಮಲ್ ಮಹಾರಾಷ್ಟ್ರ* ಮನಿಶ್ ರಂಜನ್ ಜೆನಾ- ಒಡಿಶಾ* ಪ್ರಮೋದ್ ಕುರ್ಲೇಕರ್- ಮಹಾರಾಷ್ಟ್ರ* ಶಾಂತಕುಮಾರ್ ಹತ್ತರಕಿ- ಮಹಾರಾಷ್ಟ್ರ* ಶ್ರೀನಿವಾಸ ಶಾಸ್ತ್ರಿ- ಕರ್ನಾಟಕ* ಸಿದ್ಧಾರ್ಥ್ ಶಿಂಗಡೆ-ಮಹಾರಾಷ್ಟ್ರ* ಕಿಶೋರ್ ಕುಮಾರ್ –ಕರ್ನಾಟಕ* ಶರದ್ ಕಾಂಬಳೆ-ಕರ್ನಾಟಕ* ರಮೇಶ್ ಹಿರೇಗೌಡರ್- ಕರ್ನಾಟಕ* ಸಂಜಯ್ ಶೇಲಾರ್- ಮಹಾರಾಷ್ಟ್ರ* ನಾಗೇಶ್ ಹಂಕರೆ- ಮಹಾರಾಷ್ಟ್ರ* ಶಂಕರ್ ಕಡಕುಟ್ಲಾ -ಕರ್ನಾಟಕ* ಜಿ ಆರ್ ಮಲ್ಲಾಪುರ-ಕರ್ನಾಟಕ* ಸಾಗರ್ ಬಾಂಡ್ರೆ- ಮಹಾರಾಷ್ಟ್ರ* ಕಲಾವತಿ ಕುಗಟಿ-ಕರ್ನಾಟಕ, ಗೋಪಾಲ ಸುಬೇಧಾರ- ಮಹಾರಾಷ್ಟ್ರ, ಶಂಕರ ಪಾಟೀಲ,- ಕರ್ನಾಟಕ, ವಿಶ್ವನಾಥ ಗುಗ್ಗರಿ- ಕರ್ನಾಟಕ ಈ ಹೆಸರಾಂತ ಕಲಾವಿದರ ಸಂಗ್ರಹದ ಕಲಾಕೃತಿಗಳು ಜಲವರ್ಣ, ತೈಲವರ್ಣ, ಆಕ್ರಾಲಿಕ ಮಾಧ್ಯಮದ ಕಲಾಕೃತಿಗಳು ಉತ್ತರ ಕರ್ನಾಟಕದ ಭಾಗದಲ್ಲಿ ಪ್ರತಿಷ್ಟಿತ ಕಲಾಕಾಲೇಜಿನ ಚಿತ್ರಕಲಾ ಗ್ಯಾಲರಿಯಲ್ಲಿಯ ಪ್ರದರ್ಶನದಲ್ಲಿದ್ದು ಕಲಾವಿದರು ಇದರ ವಿಕ್ಷಣೆಗೆ ಮಾಡಿ ಅಪರೂಪದ ಕ್ಷಣಗಳನ್ನು ಕಣ್ಣಾರೆ ತುಂಬಿಕೊಳ್ಳುವದು ಅವಶ್ಯವಾಗಿದೆ, ಈ ಅವಕಾಶವನ್ನು ರಾಜ್ಯದ ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳು ಕಲಾಪ್ರದರ್ಶನಕ್ಕೆ ಬೇಟಿ ನೀಡುವದು ತುಂಬಾ ಉಪಯುಕ್ತವಾಗಿದೆ. ಎಂದು ಹುಬ್ಬಳ್ಳಿ ಹೆಸರಾಂತ ಕಲಾವಿದರಾದ ಪ್ರತಾಪ ಬಹೂರೂಪಿ ತಿಳಿಸಿದರು ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ರಮೇಶ ಹಿರೇಗೌಡರ ಮತ್ತು ಕಲಾವಿದರಾದ ಎಸ್ ಎಂ ಕಾಂಬಳೆ ಹಾಜರಿದ್ದರು.
— ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಹುಬ್ಬಳ್ಳಿ-580020