Live Stream

[ytplayer id=’22727′]

| Latest Version 8.0.1 |

State News

” ಮನಸೋಲ್ಲಾಸ ಹೆಚ್ಚಿಸಿದ ‘Sanhita’ ಏರ್ ಇಂಡಿಯಾ ಕಲಾಪ್ರದರ್ಶನ “

” ಮನಸೋಲ್ಲಾಸ ಹೆಚ್ಚಿಸಿದ ‘Sanhita’ ಏರ್ ಇಂಡಿಯಾ ಕಲಾಪ್ರದರ್ಶನ “

• NGMAಗೆ ಭೇಟಿ ಕೊಡಿ, ನೀವು ನೋಡಿ ಬನ್ನಿ• ಇಟಲಿ ಕಲಾವಿದ ಕರವಾಜಿಯೋ ಕಲಾಕೃತಿ ನೋಡಲು ಮರೆಯದಿರಿ
‘ಸನ್ನಿಹಿತ’ (coming together) ಶೀರ್ಷಿಕೆಯಡಿ ಪ್ರದರ್ಶಿತ ಕಲಾಕೃತಿಗಳನ್ನು ನೋಡುವಾಗಲೆಲ್ಲ ಮತ್ತೆ ಮತ್ತೆ ನೆನಪಾಗಿದ್ದು ಇತ್ತೀಚಿಗೆ ನಡೆದ ವಿಮಾನ ದುರಂತ. ಎಷ್ಟೊಂದು ಒಳ್ಳೆಯ ಕೆಲಸ ಮಾಡಿರುವ ಏರ್ ಇಂಡಿಯಾ (Air India) ಸಂಸ್ಥೆ ಇಂದು ಈ ದುರಂತದಿಂದ ಮಾನಸಿಕವಾಗಿ ಎಂತಹ ಕಿರಿಕಿರಿ ಅನಿಸುತ್ತಿರಬಹುದು ಅನಿಸಿತು. ಭಾರತದ ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ಸಂಗ್ರಹಿಸಿ ಒಂದೇ ಸೂರಿನಡಿ ನಮಗೆಲ್ಲ ನೋಡಲು ಸಾಧ್ಯವಾಗಿಸಿದ್ದು ಇದೇ ಸಂಸ್ಥೆ, ಇದೇ ಸಂಸ್ಥೆಯ ಮಾಲೀಕರು. ಹೀಗಾಗಿ ಕಲಾಕೃತಿಗಳನ್ನು ನೋಡುವಾಗ ಏರ್ ಇಂಡಿಯಾ ವಿಮಾನ ಕಣ್ಣೆದುರು ನಿಂತಿತ್ತು!
ವಿಮಾನ ದುರಂತದ ಕರಾಳ ಸನ್ನಿವೇಶಗಳು ಘಟನೆ ನಡೆದಾಗಿನಿಂದ ಮನಸ್ಸಿಗೆ ಬಹಳ ನೋವುಂಟುಮಾಡುತ್ತಿತ್ತು. ಹೀಗಾಗಿ ಏರ್ ಇಂಡಿಯಾ ಸಂಗ್ರಹದಲ್ಲಿರುವ ಕಲಾಕೃತಿಗಳ ಪ್ರದರ್ಶನವನ್ನೇ ಮತ್ತೊಮ್ಮೆ ನೋಡಿ ಮನಸ್ಸನ್ನು ಹಗುರವಾಗಿಸಿ ಬರೋಣವೆಂದು ಬೆಂಗಳೂರಿನಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ಸುತ್ತುಬಂದೆ. ಖ್ಯಾತ ಕಲಾವಿದ ಸಾಲ್ವಡಾರ್ ಡಾಲಿ ಸೇರಿದಂತೆ ಭಾರತದ ಅನೇಕ ಪ್ರಸಿದ್ಧ ಕಲಾವಿದರ 180ಕ್ಕೂ ಹೆಚ್ಚು ಕಲಾಕೃತಿಗಳನ್ನು ವೀಕ್ಷಿಸಿದೆ. ಆಘಾತಕಾರಿ ಘಟನೆಯ ಪ್ರಭಾವವನ್ನು ಸರಿಸಿ ಮನೋಬಲ, ಮನಸೋಲ್ಲಾಸ ಹೆಚ್ಚಿಸುವ ಶಕ್ತಿ ಇರುವುದು ಈ ಕಲಾಕೃತಿಗಳಿಗೆ ಮಾತ್ರ ಅನಿಸಿತು. ಇಂತಹದ್ದೊಂದು ಅವಕಾಶ ಮಾಡಿಕೊಟ್ಟ ಏರ್ ಇಂಡಿಯಾ ಸಂಸ್ಥೆಗೊಂದು ಅಭಿನಂದನೆ ಸಲ್ಲಿಸಬೇಕನ್ನಿಸಿತು. ಹೌದು, NGMA ಕೂಡ ಅಭಿನಂದನಾರ್ಹವೆ. ಪ್ರತಿಯೊಂದು ಕಲಾಕೃತಿಯನ್ನು ವೀಕ್ಷಿಸಲು ಯಾವ ಅಡೆತಡೆ ಇರದಂತೆ ಬಹಳ ಅಚ್ಚುಕಟ್ಟಾಗಿ ಕ್ಯುರೇಟ್ ಮಾಡಿರುವ ಸುವರ್ಣ ಪಾತ್ರೊ ಮತ್ತು ದರ್ಶನ್ ಕುಮಾರ್ ವೈ.ಯು. (Subarna Patro and Darshan Kumar Y U) ಅವರೂ ಅಭಿನಂದನಾರ್ಹರು.


ಕಳೆದ ಮಾರ್ಚ್ 7ರಿಂದ ನಡೆಯುತ್ತಿರುವ ಈ ಕಲಾಪ್ರದರ್ಶನ ನೋಡಿದಷ್ಟು ಸಾಲದು ಎನ್ನುವ ಭಾವ ಮೂಡಿಸಿದೆ. ನಾವು ಇಷ್ಟಪಡುವ ಅನೇಕ ಹಿರಿಯ ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಕಲಿಕೆಗೆ ನೂರಾರು ದಾರಿಗಳನ್ನು ಈ ಕಲಾಕೃತಿಗಳು ತೋರಿಸುತ್ತವೆ. ಭಾರತೀಯ ಕಲಾ ಪರಂಪರೆಯ ವೈವಿಧ್ಯತೆಯನ್ನು ಈ ಪ್ರದರ್ಶನ ತೆರೆದಿಟ್ಟಿದೆ. ಜನಪ್ರಿಯ ಉದ್ಯಮಿ ಜೆ.ಆರ್.ಡಿ ಟಾಟಾ ಒಡೆತನದ ಸಂಸ್ಥೆಯಾಗಿರುವ ಏರ್ ಇಂಡಿಯಾ ಇಷ್ಟೊಂದು ಕಲಾವಿದರ ಕಲಾಕೃತಿಗಳನ್ನು ಸಂಗ್ರಹಿಸಿದೆ. 2023ರಲ್ಲಿ ಭಾರತ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ಈ ಎಲ್ಲಾ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.

ಇನ್ನೊಂದು ಆಸಕ್ತಿದಾಯಕ ವಿಚಾರವೇನೆಂದರೆ ಪ್ರದರ್ಶನದಲ್ಲಿರುವ ಕಲಾಕೃತಿಗಳು ಈ ಮೊದಲು ನ್ಯೂಯಾರ್ಕ್, ಲಂಡನ್, ಸಿಂಗಾಪುರ್, ಟೋಕಿಯೋ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಇರುವ ಏರ್ ಇಂಡಿಯಾ ಕಚೇರಿಗಳಲ್ಲಿ ಇದ್ದವು. ಭಾರತ ಸರ್ಕಾರ, ಸಂಸ್ಕೃತಿ ಇಲಾಖೆ ಜೊತೆಗಿನ ಒಪ್ಪಂದದ ಬಳಿಕ ಎಲ್ಲವನ್ನು ಮರಳಿ ಭಾರತಕ್ಕೆ ತಂದು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತಿದೆ. ಭಾರತದ ಬಹುತೇಕ ಎಲ್ಲಾ ಪ್ರಸಿದ್ಧ ಕಲಾವಿದರ ಸಿಗ್ನೇಚರ್ ಶೈಲಿಯ ಕಲಾಕೃತಿಗಳೆ ಏರ್ ಇಂಡಿಯಾ ಸಂಗ್ರಹದಲ್ಲಿರುವುದು ಇನ್ನೊಂದು ವಿಶೇಷ.


ಸ್ನೇಹಿತರೆ, ಇದೊಂದು ಮಹತ್ವದ ಕಲಾಪ್ರದರ್ಶನ. ಬಿಡುವ ಮಾಡಿಕೊಂಡು ನೋಡಿ ಬನ್ನಿ. ಈಗಾಗಲೇ ಎರಡು ತಿಂಗಳು ಕಳೆದಿದೆ. ಇನ್ನು ಸ್ವಲ್ಪ ದಿನಗಲ ಕಾಲ ಇರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಬಿಡುವು ಮಾಡಿಕೊಂಡು ಭೇಟಿ ಕೊಡಿ. ಇನ್ನೊಂದು ವಿಚಾರ, ಸದ್ಯ NGMA ಇಟಲಿಯ ವಿಶ್ವ ವಿಖ್ಯಾತ ಕಲಾವಿದ ಕರವಾಜಿಯೋ (Caravaggio) ಅವರ ‘Mary Magdalene in Ecstasy’ ಶೀರ್ಷಿಕೆಯ ಕಲಾಕೃತಿಯನ್ನು ಪ್ರದರ್ಶಿಸಿದೆ. ತಪ್ಪದೇ ನೋಡಿ ಬನ್ನಿ.
( ‘ವಿಕ್ರಮ’ ಮುಂದಿನ ಸಂಚಿಕೆಯಲ್ಲಿ ಕರವಾಜಿಯೋ ಕುರಿತ ಬರಹ ಇರಲಿದೆ)

Courtesy : –Ganapathi Agnihothri
Web Link: https://agniprapancha.com/air-india-art-exhibition-at…/ #nationalgalleryofmodernart #NGMA #nammabengaluru #airindiaartexhibition #airindia #JRDTata #artcommunity #ಅಗ್ನಿಪ್ರಪಂಚ #agniprapancha #artkarnataka #karnatakaartist #indianartist #CultureDepartment #govtindia


Vishwanath Guggari
";