Live Stream

[ytplayer id=’22727′]

| Latest Version 8.0.1 |

India News

ತೆಲಂಗಾಣ ರಾಜ್ಯದ ಸರಕಾರಿ ಸೌಮ್ಯದ ಸ್ಟೇಟ್ ಗ್ಯಾಲರಿ ಆಫ್ ಆರ್ಟ್ “ಆಲ್ ಇಂಡಿಯಾ ಆರ್ಟ್ ಕಾಂಪಿಟೇಶನ್ ಮತ್ತು ಪ್ರದರ್ಶನ

ತೆಲಂಗಾಣ ರಾಜ್ಯದ ಸರಕಾರಿ ಸೌಮ್ಯದ ಸ್ಟೇಟ್ ಗ್ಯಾಲರಿ ಆಫ್ ಆರ್ಟ್ “ಆಲ್ ಇಂಡಿಯಾ ಆರ್ಟ್ ಕಾಂಪಿಟೇಶನ್ ಮತ್ತು ಪ್ರದರ್ಶನ

 

ದೃಶ್ಯಕಲಾ ಕ್ಷೆತ್ರದಲ್ಲಿ ಶಿಬಿರ,ಕಾರ್ಯಗಾರ,ವಿಚಾರ ಗೋಷ್ಠಿ ಹಾಗೂ ಇನ್ನಿತರ ಕಲಾ ಚಟುವಟಿಕೆಗಳು ಕಲಾವಿದರ ಆಂತರ್ಯದ ಬೌದ್ದಿಕ ಹಸಿವನ್ನು ನೀಗಿಸಿ ಅವರ ಕಲಾ ವಿಸ್ತಾರಕ್ಕೆ ಪ್ರೇರಣೆ ಯಾಗಿ ನಿಲ್ಲುತ್ತವೆ .ಅದೇ ರೀತಿ ಕಲಾ ಸ್ಪರ್ಧೆ ಗಳು ಕಲಾವಿದರ ಕಲಾ ಸಾಮರ್ಥ್ಯವನ್ನು ಒರೆಗೆ ಹಚ್ಚಿ ನೋಡಲು ಸಹಾಯಕಾರಿ ಯಾಗುತ್ತವೆ. ಹೀಗಾಗಿಯೆ ಕಲಾ ಕ್ಷೇತ್ರದಲ್ಲಿ ಅನೇಕ ಸ್ಪರ್ಧೆಗಳು ಭಾರತದ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಾ ಬಂದು ಕಲಾವಿದರ ಸುಪ್ತ ಅಭಿವ್ಯಕ್ತಿಗೆ ಜಾಗೃತಿಯ ಸ್ವರೂಪ ನೀಡುತ್ತವೆ. ಭಾರತದಲ್ಲಿ ಅನೇಕ ಸಂಸ್ಥೆಗಳು ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಕಲಾವಿದರ ಸೃಜನಶೀಲತೆ ಯನ್ನು ಕಲಾಕೃತಿಯ ಮೂಲಕ ಪ್ರತಿಪಾದಿಸಲು ವೇದಿಕೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂತಹುದೇ ಒಂದು ಸಣ್ಣ ಪ್ರಯತ್ನ ಕಳೆದ ಕೆಲವು ವರ್ಷಗಳಿಂದ ತೆಲಂಗಾಣ ರಾಜ್ಯದ ಸರಕಾರಿ ಸೌಮ್ಯದ ಸ್ಟೇಟ್ ಗ್ಯಾಲರಿ ಆಫ್ ಆರ್ಟ್ “ಆಲ್ ಇಂಡಿಯಾ ಆರ್ಟ್ ಕಾಂಪಿಟೇಶನ್ ಮತ್ತು ಪ್ರದರ್ಶನ ವನ್ನು ಹಮ್ಮಿಕೊಳ್ಳುತ್ತಿದೆ .ಇತ್ತೀಚೆಗೆ ಹಮ್ಮಿಕೊಂಡ ಅಖಿಲ ಭಾರತ ಪೇಂಟಿಂಗ್ ಸ್ಪರ್ಧೆ.2025 ರಲ್ಲಿ , ಭಾರತದ ಅನೇಕ ಕಡೆಯಿಂದ 145 ಹೆಚ್ಚು ಕಲಾವಿದರು ಭಾಗವಹಿಸಿದ್ದರು ಅದರಲ್ಲಿ ಕಲಬುರಗಿಯ ಕಲಾವಿದರು ಕರ್ನಾಟಕ ದಿಂದ ಹದಿನಾಲ್ಕು ಕಲಾವಿದರು ಭಾಗವಹಿಸಿದ್ದರು.

 

ಇದರಲ್ಲಿ ಕಲಬುರಗಿಯ ಅಖಿಲೇಶ್ ದೊಡ್ಡಮನಿ ಅವರದಿ ಸರ್ಚಿಂ

ಗ್ ಮ್ಯಾಪ್ .ಹೆಚ್.ವಿ.ಮಂತಟಿ ಅವರ ನೇಚರ್ ಈಜ್ ಅವರ್ ಹೆಲ್ತ್ . ಸಿದ್ದಾರೆಡಿ ಯವರ ವಿಜಯ ಪಥ.ಬೆಂಗಳೂರಿನ ಅಗ್ನಿಹೋತ್ರಿ ಯವರ ಅನ್ಸರ್ಟೇನ್ ಇನ್ಸ್ಟಾಬಿಲಿಟಿ.ಹಾಗೂ ಕುಪ್ಪಣ್ಣ ಕಂದಗಲ್ ಅವರ ಅನ್ಟೋಲ್ಡ ಎಂಬ ಕೃತಿ ಗಳಿಗೆ ಪ್ರಶಸ್ತಿ ಲಭಿಸಿದೆ. ಅದೇ ರೀತಿ ರಾಮಗಿರಿ ಪೊಲೀಸ್ ಪಾಟೀಲ್ ಅವರ ‘ಮಹಾರಾಜ ‘ ಸೂರ್ಯಕಾಂತ ನಂದೂರ ಅವರ ‘ಯೂ ಆರ್ ಡೆವೋಷನ್, ಗಿರೀಶ್ ಕುಲಕರ್ಣಿ ಯವರ ‘ಅರೇಂಜ್ ‘ ಅಜಮ್ ಅವರ ‘ಬ್ರೀಥ್ ವಿಥ್ ನೇಚರ್ ‘ ಧಾನಯ್ಯ ಚೌಕಿಮಠ ಅವರ ಶಿಲ್ಪ…ಚಿತ್ರದುರ್ಗ ದಾದಾ ಅವರ ‘ ಅರ್ಥ್’ ಅಲಕಾ ಚಡ್ಡಾ ಹರ್ಪಲಾನಿ ಅವರ ‘ ದಿ ವೈಸ್ ವಿಥಿನ್ ‘ ಈ ಎಲ್ಲ ಕಲಾ ಕೃತಿ ಗಳು ಪ್ರದರ್ಶನಕ್ಕೆ ಆಯ್ಕೆ ಯಾಗಿದವು .ಒಟ್ಟಾರೆ ಈ ಪ್ರದರ್ಶನ ದಲ್ಲಿ ಆಯ್ಕೆ ಯಾದ ಕೃತಿಗಳು ನೋಡುಗನೊಂದಿಗೆ ನೇರವಾಗಿ ಮಾತಾಡುವಂತಿದ್ದವು ಅಂದರೆ ಕಲಾವಿದನ ಅಭಿವ್ಯಕ್ತಿಯು ಇಲ್ಲಿ ಕ್ಲಿಷ್ಟಕರ ವಾಗಿರದೆ ಸರಳತೆ ಇಂದ ಕೂಡಿದ್ದು ಕಲಾಕೃತಿ ಗಳು ಒಂದು ರೀತಿಯ ಸಾಂದರ್ಭಿಕ ಚಿತ್ರಗಳ ಛಾಯೆ ಕಂಡು ಬರುತ್ತಿತ್ತು. ಈ ಪ್ರದರ್ಶನ ಮೇ 30 ರಿಂದ ಜೂನ್ 09 ರ ವರೆಗೆ ನಡೆಯಿತು…..

–.ಹೆಚ್. ವಿ.ಮಂತಟಿ. ಉಪನ್ಯಾಸಕರು ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆ.ಕಲಬುರಗಿ.


Vishwanath Guggari
";