| Ten Strokes ಮತ್ತು ವಿಭಿನ್ನ ಆಲೋಚನೆ |• ಮೂರ್ತ, ಅಮೂರ್ತಗಳ ಸಮ್ಮಿಲನದ ಒಂದೊಳ್ಳೆಯ ಸಮೂಹ ಕಲಾಪ್ರದರ್ಶನ, ವರ್ಣಚಿತ್ರಗಳು ಮತ್ತು ಶಿಲ್ಪ ಕಲಾಕೃತಿಗಳನ್ನು ವಿಭಿನ್ನ ಆಯಾಮದಲ್ಲಿ ನೋಡಬಹುದಾದ ಮತ್ತು ಆಲೋಚನೆಗಳ ವಿಭಿನ್ನತೆ (The differentiation of thoughts) ಗಮನಿಸಬಹುದಾದ ಕಲಾಪ್ರದರ್ಶನ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 3ರಲ್ಲಿ ನಡೆಯುತ್ತಿದೆ. ‘Ten Strokes’ ಶೀರ್ಷಿಕೆಯ ಈ ಸಮೂಹ ಕಲಾಪ್ರದರ್ಶನದಲ್ಲಿ ಉತ್ತರ ಭಾರತದ ಹತ್ತು ಮಂದಿ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಆಶಿಶ್ ಮೊಂಡಲ್ (As his Mondal), ಬಿಬಾಸ್ ಬೈದ್ಯ (Bibhas Baidya), ಜಿಬನ್ ಬಿಸ್ವಾಸ್ (Jiban Biswas), ಜ್ಯೋತಿರ್ಮಯ್ ದಳಪತಿ (Jyotirmay Dalapati, ಪಬಿತ್ರಾ ಬರ್ಮನ್ (Pabitra Barman), ಸಂಜಯ್ ಸಮಂತಾ (Sanjay Samanta), ಸುಬ್ರತಾ ಕರ್ಮಾಕರ್ (Subrata Karmakar), ಸುಭೇಂದು ಬಿಸ್ವಾಸ್ (Subhendu Biswas), ಸ್ವಪನ್ ಕೆ. ಘೋಷ್ (Swapan k Ghosh) ಮತ್ತು ತನ್ಮಯ್ ಹಲ್ದರ್ (Tanmay Halder) ಅವರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
ಮೂರ್ತ ಮತ್ತು ಅಮೂರ್ತ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಪ್ರತಿಯೊಬ್ಬ ಕಲಾವಿದರ ಕಲಾಕೃತಿಗಳು ಭಿನ್ನವೆನಿಸುವ ಶೈಲಿ, ಆಲೋಚನೆಗಳಿಂದ ಕೂಡಿವೆ.
ಸ್ನೇಹಿತರೆ, ಈ ಕಲಾಪ್ರದರ್ಶನ ಡಿಸೆಂಬರ್ 5, ಇಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.
ಈ ಎಲ್ಲ ಕಲಾವಿದರಿಗೆ ಅಭಿನಂದನೆಗಳು. Congratulations and Best wishes to all
Courtesy: ®agniprapancha #tenstrokes #karnatakachitrakalaparishath #ckpbengaluru #karnatakaart #artkarnataka #ಅಗ್ನಿಪ್ರಪಂಚ