‘CATALYSIS’ ನೋಟಕ್ಕೆ ಬೇಕು ವೇಗವರ್ಧನೆ! |- BSVAE ವಾರ್ಷಿಕ ಕಲಾಪ್ರದರ್ಶನ ಗಮನಾರ್ಹ
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಬೆಂಗಳೂರು ಸ್ಕೂಲ್ ಆಫ್ ವಿಷ್ಯುವಲ್ ಆರ್ಟ್ಸ್ (BSVAE) ವಿದ್ಯಾರ್ಥಿಗಳ ವಾರ್ಷಿಕ ಕಲಾಪ್ರದರ್ಶನ ನಡೆಯುತ್ತಿದೆ. ಭವಿಷ್ಯದ ಕಲಾವಿದರಾಗಿದ್ದರಿಂದ ಅವರ ಈ ಹಂತದ ಕಲಾಕೃತಿಗಳು ಮಹತ್ವ ಪಡೆದುಕೊಳ್ಳುತ್ತವೆ.
ಪ್ರಸ್ತುತ ಸಂದರ್ಭದಲ್ಲಿ ಕಲಾಶಿಕ್ಷಣದ ಒಂದಿಷ್ಟು ಸವಾಲುಗಳನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ವೀಕ್ಷಿಸುವಾಗ ಈ ಕಾಲಘಟ್ಟದಲ್ಲಿ ಹಿರಿಯ ವಿದ್ಯಾರ್ಥಿಗಳು ದೃಶ್ಯ ಕಲೆಯ ಕುರಿತಾಗಿ ಯಾವ ಅಭಿಪ್ರಾಯ ಹೊಂದಿದ್ದಾರೆ, ಯಾವ ಪ್ರಯತ್ನದಲ್ಲಿದ್ದಾರೆ, ಯಾವ ಕಲಾಪ್ರಕಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
‘CATALYSIS’ ಕಲಾಪ್ರದರ್ಶನ ಅಕ್ಟೋಬರ್ 12, ನಾಳೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.
Courtesy :#agniprapancha #ಅಗ್ನಿಪ್ರಪಂಚ #artexhibition