| ‘ THE MASTERS & THE MODERN ‘ |
• Gallery Gನಲ್ಲಿ ಹಿರಿಯ ಕಲಾವಿದರ ಕಲಾಪ್ರದರ್ಶನ
• ದಕ್ಷಿಣ ಭಾರತ ಕಲಾವಿದರ ಮಹತ್ವದ ಕಲಾಕೃತಿಗಳು
‘ THE MASTERS & THE MODERN ‘ ಕಲಾಪ್ರದರ್ಶನ ಬೆಂಗಳೂರಿನ ಪ್ರತಿಷ್ಠಿತ ಗ್ಯಾಲರಿ ಜೀ (Gallery G)ನಲ್ಲಿ ನಡೆಯುತ್ತಿದ್ದು, 50ಕ್ಕೂ ಹೆಚ್ಚು ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮೂರ್ನಾಲ್ಕು ತಲೆಮಾರಿನ ಕಲಾವಿದರ ಕಲಾಕೃತಿಗಳು ಇಲ್ಲಿರುವುದು ವಿಶೇಷ. ಜೊತೆಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳ ಹಿರಿಯ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾಗಿ ಗ್ಯಾಲರಿ ಹೇಳಿಕೊಂಡಿದೆ.
ಹಿರಿಯ ಕಲಾವಿದರ ಪ್ರದರ್ಶಿತ ಕಲಾಕೃತಿಗಳು ಆ ಕಾಲಘಟ್ಟದ ರಚನಾ ಕ್ರಮದಿಂದಾಗಿ ಹಾಗೂ ಅವರವರ ಕಲಾಶೈಲಿಯಿಂದಾಗಿ ಹೆಚ್ಚೆಚ್ಚು ಗಮನ ಸೆಳೆಯುವಂತೆ ಮಾಡುತ್ತವೆ. ಕೆಲವು ಮಹತ್ವದ ಕಲಾಕೃತಿಗಳೂ ಇಲ್ಲಿವೆ. ಖ್ಯಾತನಾಮ ಹಿರಿಯ ಕಲಾವಿದರ ಕಲಾಕೃತಿಗಳು ಇರುವ ಕಾರಣದಿಂದಾಗಿ ಈ ಪ್ರದರ್ಶನ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ.
ಖ್ಯಾತ ಕಲಾವಿದರಾದ ಎಸ್.ಎಂ.ಪಂಡಿತ್ ಅವರು 1960ರಲ್ಲಿ ರಚಿಸಿದ ‘DESCENT OF GANGA’, ರಘುನಾಥ ನಾಯ್ಡು ಅವರ ‘KODANDA RAMA’, ಪಿ.ಮುಕುಂದನ್ ತಂಪಿ ಅವರು 1930ರಲ್ಲಿ ರಚಿಸಿದ ‘PORTRAIT OF A TRAVANCORE NOBLEMAN’, ನೀಲಕಾಂತ ಪಿಳ್ಳೈ ಅವರು 1931ರಲ್ಲಿ ರಚಿಸಿದ ‘PORTRAIT OF AN IYER LADY’, ಎನ್.ಎನ್.ನಂಬಿಯಾರ್ ಅವರು 1947ರಲ್ಲಿ ರಚಿಸಿದ ‘PORTRAIT OF INDIRA’, ಮಂಗಳಾ ಬಾಯಿ ತಂಪುರಟ್ಟಿ ಅವರು 1920ರಲ್ಲಿ ರಚಿಸಿದ ‘MANGALA BAYI’, ಕೆ. ಪದ್ಮನಾಭ ತಂಪಿ ಅವರು 1910ರಲ್ಲಿ ರಚಿಸಿದ ‘PORTRAIT OF MOOLAM TIRUNAL’, ಕಲಾಕೃತಿಗಳು ಬೇರೆಯದೇ ಆದ ನೆಲೆಯಲ್ಲಿ ಉಳಿದುಕೊಳ್ಳುವಂತವು. ನೈಜತೆಗೆ ಬಹಳ ಹತ್ತಿರದಲ್ಲಿ ನಿಲ್ಲುವಂತಹ ಕಲಾಕೃತಿಗಳು.
ಆಧುನಿಕ ಕಲಾ ಪರಂಪರೆಗೆ ಒಗ್ಗಿಕೊಂಡು ತಮ್ಮದೇ ಶೈಲಿಯ ಮೂಲಕ ಗುರುತಿಸಿಕೊಂಡಿರುವ ಅಚ್ಚುತ್ತನ್ ಕುಡಲ್ಲೂರ್ ಮತ್ತು ಜಿ.ಎಸ್.ಶೇಣೈ ಅವರ ಶೀರ್ಷಿಕೆ ರಹಿತ ಅಮೂರ್ತ ಕಲಾಕೃತಿಗಳು ಹೊಸದೊಂದು ಅನುಭವ ನೀಡಬಲ್ಲ ಕಲಾಕೃತಿಗಳಾಗಿವೆ. ಜಿ.ರಾಮನ್ ಅವರ ಶೀರ್ಷಿಕೆ ರಹಿತ ಕಲಾಕೃತಿ ಭಾರತೀಯ ಜನಪದ ಕಲೆಗಳ ರೂಪಾಂತರವಾಗಿ ಕಾಣಿಸುವ ಸಾಧ್ಯತೆಯೆ ಹೆಚ್ಚು. ಹಿಮಾ ಹರಿಹರನ್ ಅವರ ಶೀರ್ಷಿಕೆ ರಹಿತ ಕಲಾಕೃತಿಗಳು, ಜಿತಿಶ್ ಕಲ್ಲಟ್ ಅವರ ‘RAIN STORY 1 & 2 ಕಲಾಕೃತಿಗಳು, ಮಿಲಿಂದ್ ನಾಯಕ್ ಅವರ TREE ಸರಣಿಯ ಕಲಾಕೃತಿಗಳು ಸಂಕೇತ ಕೇಂದ್ರಿತವೆನಿಸುವಂತವು. ಆಧುನಿಕ ಕಲೆಯ ಮಜುಲು ಎನ್ನಲೇನಡ್ಡಿಯಿಲ್ಲ. ಇನ್ನು, ಯೂಸುಫ್ ಅರಕ್ಕಲ್ ಅವರ ‘KITES’, ಥೋಟಾ ವೈಕುಂಠಮ್ ಅವರ ‘UNTITLED’, ಎಸ್.ಜಿ.ವಾಸುದೇವ್ ಅವರ ‘THEATRE OF LIFE’ ಮತ್ತು EARTHSCAPE’, ಎಸ್.ಅರುಣಗಿರಿ ಅವರ ‘MY BESTIE’, ಆರ್.ಬಿ.ಭಾಸ್ಕರನ್ ಅವರ ‘THEYYAM’, ಪುಷ್ಪಾ ದ್ರಾವಿಡ್ ಅವರ ‘END OF THE DAY, SELL OUT ಮತ್ತು ‘BUSINESS ROUTINE’, ಪಿ.ಪೆರುಮಾಳ್ ಅವರ ‘A VILLAGE SCENE’, ಮೊಹಮ್ಮದ್ ಒಸ್ಮಾನ್ ಅವರ ‘GANGIREDDU’, ಎಂ. ರಾಜಾ ಅವರ ‘NOBLE WOMAN 1’, ಕೆ.ಶ್ರೀನಿವಾಸುಲು ಅವರ ಶೀರ್ಷಿಕೆ ರಹಿತ ಕಲಾಕೃತಿಗಳು ಆಧುನಿಕ ಮತ್ತು ನವ್ಯತೆಗೆ ಕನ್ನಡಿ ಹಿಡಿದಂತಿವೆ. ಲಕ್ಷ್ಮಣ್ ಅಲೈ ಅವರ ಶೀರ್ಷಿಕೆ ರಹಿತ ಕಲಾಕೃತಿ, ಕೆ.ಎಂ. ಆದಿಮೂಲಂ ಅವರ ‘LORD GANESHA’, ಕೆ.ಲಕ್ಷ್ಮಾ ಗೌಡ್ ಅವರ , ‘COUPLE, LADY ಮತ್ತು COUPLE AND HORSE’, ಕೆ.ಎಲ್.ಲೆಯಾನ್ ಅವರ ‘HEATED’, ಕೆ.ಜಿ.ಸುಬ್ರಹ್ಮಣ್ಯಂ ಅವರ ಶೀರ್ಷಿಕೆ ರಹಿತ ಕಲಾಕೃತಿಗಳು ಹಾಗೂ ಕೆ.ಕೆ.ಹೆಬ್ಬಾರ್ ಅವರ ‘KASHMIR SHIKARAS’ ಮತ್ತು ‘KASHMIR PHALGAM’, ಜೆ.ಎಂ.ಎಸ್ ಮಣಿ ಅವರ ‘BANANA SELLER’, ಗೊವಿಂದರಾಜ್ ಅವರ ‘MY VILLAGE FRIENDS’, ಜಿ.ಸುಬ್ರಮಣಿಯನ್ ಅವರ ಶೀರ್ಷಿಕೆ ರಹಿತ ಕಲಾಕೃತಿಗಳು ಕೂಡ ನವ್ಯ ಪರಂಪರೆಯ ನೆಲೆಯಲ್ಲೆ ನೊಡಬೇಕಾದ ಕಲಾಕೃತಿಗಳಾಗಿವೆ.
ಉಳಿದಂತೆ ಅವಿನಾಶ್ ವೀರರಾಘವನ್ ಅವರ ‘UNDERWORLD BELLY BUTTON’, ಬಾರಾ ಭಾಸ್ಕರನ್ ಅವರ ‘CHAMBERS OF AMAZING MUSEUM 1’, ಗುರುದಾಸ್ ಶೆಣೈ ಅವರ ‘SPIRITUAL ODYSSEY’, ಹರ್ಷ ಚೆನ್ನಂಗೋಡ್ ಅವರ ‘CONTEMPORARY’, ಆನಂದ ಬೇಕ್ವಾಡ್ ಅವರ ‘MAHAKUMBH’, ಎಂ. ರೆಡ್ಡೆಪ್ಪ ನಾಯ್ಡು ಅವರ ‘GAJENDRA MOKSHA’ ಮತ್ತು ‘SHIVA PARIVAR’, ಸೂರ್ಯ ಪ್ರಕಾಶ್ ಅವರ ‘POOL OF LIFE’ ಹಾಗೂ ರಿಯಾಜ್ ಕೊಮು ಅವರ ‘THE CONTORTIONIST 1,2 ಮತ್ತು 3 ಕಲಾಕೃತಿಗಳು ಸಮಕಾಲೀನ ಭಾವ ತುಂಬಿಕೊಂಡಿರುವ, ಆಧುನಿಕತೆಯ ಪ್ರಭಾವವೂ ಉಳ್ಳ ಕಲಾಕೃತಿಗಳಾಗಿವೆ.
ಪಿ.ಕೆ.ಸದಾನಂದನ್, ರಾಮನರಸಯ್ಯ, ಸೊಮನ್ ಬಾಬು ಅವರ ಕಲಾಕೃತಿಗಳು ಕೇರಳ ಮ್ಯೂರಲ್ ಭಾಗವಾದ ಕಾರಣ ಕೌಶಲ್ಯದ ದೃಷ್ಟಿಯಿಂದ ನೋಡುಗರಿಗೆ ಆಪ್ತವೆನಿಸುತ್ತವೆ. ವರ್ಣರಂಜಿತ ಮತ್ತು ಪೌರಾಣಿಕ ಕಥೆ ಹೇಳುವ ಕಲಾಕೃತಿಯಾಗಿಯೇ ಕಾಡುತ್ತವೆ. ಅದರಾಚೆ ಗ್ರಹಿಸಲಸಾಧ್ಯ.
ಗ್ಯಾಲರಿ ಜೀ, ವಿಶೇಷವಾಗಿ ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಇಂತಹದ್ದೊಂದು ಕಲಾಪ್ರದರ್ಶನಕ್ಕೆ ಬೆಂಬಲಿಸಿ ಕಾರಣೀಕರ್ತರಾಗಿದ್ದಾರೆ. ಇವರ ಕಾರ್ಯ ಅಭಿನಂದನಾರ್ಹ. ‘ THE MASTERS & THE MODERN ‘ ಕಲಾಪ್ರದರ್ಶನ ಮಾರ್ಚ್ 31ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.
Courtesy : Ganapathi Agnihothri
®agniprapancha
WebLink:
https://agniprapancha.com/the-masters-the-modern-at…/
#galleryG #themastersandthemodern #artkarnataka #karnatakaart #Ggallery #ಅಗ್ನಿಪ್ರಪಂಚ #agniprapancha
—