Live Stream

[ytplayer id=’22727′]

| Latest Version 8.0.1 |

Local News

| ಬ್ರಿಟಿಷ್ ಕಾಲದ ಜವಳಿ ಲೇಬಲ್ಲುಗಳ ‘Ticket Tika Chaap’ ಪ್ರದರ್ಶನ |

| ಬ್ರಿಟಿಷ್ ಕಾಲದ ಜವಳಿ ಲೇಬಲ್ಲುಗಳ ‘Ticket Tika Chaap’ ಪ್ರದರ್ಶನ |

ನೂರಾರು ವರ್ಷಗಳ ಹಿಂದೆ ಬಟ್ಟೆಗಳ ಮೇಲೆ ಬಹುವರ್ಣದ ಲೇಬಲ್ಗಳು ಇರುತ್ತಿದ್ದವು. 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದಲ್ಲಿ ಇವು ಹೆಚ್ಚೆಚ್ಚು ಕಾಣಲು ಸಾಧ್ಯವಾಗುತ್ತಿತ್ತು. ಈ ಕಾಲಘಟ್ಟದವರಿಗೆ ಈ ಲೇಬಲ್ಗಳ ಬಗ್ಗೆ ಮಾಹಿತಿ ಇಲ್ಲದೇ ಇರಬಹುದು. ಆದರೆ, ತಿಳಿದುಕೊಳ್ಳಲೇಬೇಕಾದ ಅನೇಕ ಸಂಗತಿಗಳನ್ನು ಈ ಲೇಬಲ್ ಗಳು ಒಳಗೊಂಡಿರುತ್ತಿದ್ದವು.

ಒಂದಕ್ಕಿಂತ ಒಂದು ವಿಭಿನ್ನ ಮಾಹಿತಿಗಳನ್ನು ಹೊಂದಿರುತ್ತಿದ್ದವು. ಅಂದಿನ ರಾಜ-ರಾಣಿಯರ ಭಾವಚಿತ್ರಗಳು, ಪೌರಾಣಿಕವಾದ ಅನೇಕ ದೃಶ್ಯಗಳು, ರಾಜಕೀಯ ಪ್ರೇರಿತ ಸಂಗತಿಗಳು ಮತ್ತು ಚಿಹ್ನೆಗಳು, ಅಂದಿನ ವಾಹನ ಮತ್ತು ಟ್ಯಾಬ್ಲೋಗಳನ್ನು ಹೊಂದಿರುತ್ತಿದ್ದವು. ಅಂದಿನ ಜೀವನ ಕ್ರಮವನ್ನು ಪ್ರತಿಬಿಂಬಿಸುವ ವರ್ಣಚಿತ್ರಗಳೂ ಇರುತ್ತಿದ್ದವು. ವಿಶೇಷವಾಗಿ ಈ ಲೇಬಲ್ಗಳು ಭಾರತೀಯ ಜವಳಿ ಉದ್ಯಮದಲ್ಲಿ ಹೆಚ್ಚೆಚ್ಚು ಬಳಕೆ ಆಗಿರುವುದನ್ನು ಗಮನಿಸಬಹುದಾಗಿದೆ.

ಜವಳಿಯ ಬ್ರಾಂಡಿಂಗ್ ಮತ್ತು ಮಾರುಕಟ್ಟೆಯಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗಬೇಕು ಎನ್ನುವ ಕಾರಣದಿಂದಲೂ ಲೇಬಲ್ಗಳನ್ನು ಬಳಸಲಾಗುತ್ತಿತ್ತು. ಕ್ರೊಮೊಲಿಥೋ ತಂತ್ರಗಾರಿಕೆಯಿಂದ ಕೂಡಿರುವ ಮುದ್ರಣಗಳು ಇವಾಗಿರುತ್ತಿದ್ದವು. ಒಂದೊಂದು ಲೇಬಲ್ಗಳೂ ಒಂದು ಅಪರೂಪ ಕಲಾಕೃತಿಗಳಾಗಿರುತ್ತಿದ್ದವು.


ಇಂತಹ ಲೇಬಲ್ ಗಳ ಪ್ರದರ್ಶನ ‘ಟಿಕೆಟ್ ಟಿಕಾ ಚಾಪ್ (Ticket Tika Chaap) ಬೆಂಗಳೂರಿನ ಮ್ಯೂಸಿಯಂ ಆಫ್ ಆರ್ಟ್ & ಫೋಟೊಗ್ರಫಿ (MAP) ಗ್ಯಾಲರಿಯಲ್ಲಿ ಆರಂಭವಾಗಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತವಿದ್ದ ಕಾಲಘಟ್ಟದಲ್ಲಿ ಇಲ್ಲಿನ ಕಾಟನ್ ಬಟ್ಟೆಗಳನ್ನು ತಯಾರಿಸುವ ಗಿರಣಿಗಳಲ್ಲಿ ಪ್ರತಿಯೊಂದು ಪ್ರಾಡಕ್ಟ್ಗಳ ಮೇಲೆ ಈ ಲೇಬಲ್ಗಳನ್ನು ಬಳಸಲಾಗುತ್ತಿತ್ತು ಎನ್ನುವುದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಪೂರ್ಣವಾಗಿದ್ದ ವಿಚಾರಗಳ ಕುರಿತು ಇನ್ನಷ್ಟು ಅಧ್ಯಯನ ನಡೆಸಿದ ನಂತರದ ಪ್ರದರ್ಶನ ಇದಾಗಿದೆ.

–Ganapathi Agnihothri

Courtesy : ®agniprapancha
WebLink: #MAP #musiumofartandphotography #agniprapancha #ಅಗ್ನಿಪ್ರಪಂಚ #artist #tickettikachaap


Vishwanath Guggari
";