Live Stream

[ytplayer id=’22727′]

| Latest Version 8.0.1 |

State News

“ಕಲಾಕೃತಿಯೊಂದು ಇತಿಹಾಸ ಸೃಷ್ಟಿಸುವುದು ಯಾವಾಗ?”

“ಕಲಾಕೃತಿಯೊಂದು ಇತಿಹಾಸ ಸೃಷ್ಟಿಸುವುದು ಯಾವಾಗ?”

“ಕಲಾಕೃತಿಯೊಂದು ಇತಿಹಾಸ ಸೃಷ್ಟಿಸುವುದು ಯಾವಾಗ?” ಎಂಬ ನನ್ನ ಶೀರ್ಷಿಕೆಯ ಬರೆಹವೊಂದು ಮೂಡಿಬರುವಂತೆ ಮಾಡಿದ ವಿ.ಜಿ. ಅಂದಾನಿಯವರ ಕಲಾಕೃತಿಗಳ ಪ್ರದರ್ಶನವೊಂದು ,ಬೆಂಗಳೂರಿನಲ್ಲಿ ಬಹು ಹಿಂದೆ ನಡೆದಿತ್ತು. ಅದಕ್ಕೂ ಮೊದಲೇ 1985ರಲ್ಲಿ ಅವರ ” ಫ್ಯಾಟ್ ” ಶೀರ್ಷಿಕೆಯ ಕಲಾಕೃತಿಗಳು ನಮ್ಮ Youth Writers and Artists Guild /Karnataka Chitrakala Parishat /ITC ಆಶ್ರಯದ Every Monday weekly Art Exhibition ನಲ್ಲಿ ಪ್ರದರ್ಶಿಸಲ್ಪಟ್ಟಿದ್ದವು. ಆ ಭಾಗದ ಹಲವಾರು ಕಲಾವಿದ ಕಲಾವಿದೆಯರ ಕಲಾಕೃತಿಗಳೇ ಅಲ್ಲದೆ ಕಲ್ಬುರ್ಗಿಯ ಐಡಿಯಲ್ ಫೈನ್ ಆರ್ಟ್ಸ್ ನ “ಮಿಕ್ಸೆಡ್ ಬ್ಯಾಗ್ ” ಶೀರ್ಷಿಕೆಯ ಹಲವಾರು ವಿದ್ಯಾರ್ಥಿಗಳ ಕಲಾಕೃತಿಗಳ ಪ್ರದರ್ಶನಗಳು ನಮ್ಮಲ್ಲಿ ನಡೆದವು, ಇರಲಿ.
ಅಸಾಮಾನ್ಯ ಕಲಾಶಿಕ್ಷಕರಾದ ಅಂದಾನಿ,ನಮ್ಮ ನಡುವೆ ಇರುವ ಅತ್ಯುತ್ತಮ, ಸಮಕಾಲಿನ ಕಲಾವಿದರೂ ಹೌದು. ಐತಿಹಾಸಿಕ ಪ್ರಜ್ಞೆ ಮತ್ತು ಸಮಕಾಲೀನತೆಗಳನ್ನು ಅರಗಿಸಿಕೊಂಡ,ಹಲವು ಮಾಧ್ಯಮಗಳ ಅಭಿವ್ಯಕ್ತಿಗಳು ಅವರವು. ದೃಶ್ಯಕಲಾ ಇತಿಹಾಸ, ಕಲ್ಯಾಣ ಕರ್ನಾಟಕದ ಸಾಹಿತ್ಯ,ಕಲೆ, ಕಲಾವಿದರು ಮತ್ತು ಸಾಹಿತಿಗಳು, ಸಂಗೀತ,ನೃತ್ಯ, ನಾಟಕ ,ಸ್ಥಳೀಯ ವಾಸ್ತು ಶಿಲ್ಪ,ದೇವಾಲಯ ಶಿಲ್ಪ, ದೇವಾಲಯ ವಾಸ್ತುಶಿಲ್ಪ ,ಜನಪದ ಚಿತ್ರ,ಸಂಗೀತ,ನೃತ್ಯ ಇತ್ಯಾದಿಗಳ ಜೊತೆ ಜೊತೆಗೆ ಆ ಭಾಗದ ಜನರ ಬದುಕು, ಈ ಎಲ್ಲವುಗಳನ್ನು ಅರಗಿಸಿಕೊಂಡ ಅಭಿವ್ಯಕ್ತಿಗಳು ಅವರವು. ಅಂದರೆ ದೇಶವಿದೇಶಗಳ, ದೃಶ್ಯಕಲೆ ಮತ್ತು ಕಲಾವಿದರ ಪ್ರಭಾವದ ಆತಂಕವನ್ನು ಅರಗಿಸಿಕೊಂಡು, ತಮ್ಮದೇ ಆದ ರೀತಿಯಲ್ಲಿ ಅಭಿವ್ಯಕ್ತಿಸುತ್ತ ಬಂದವರು ಅಂದಾನಿ. “ಅಕ್ಕಮಹಾದೇವಿ” ಶೀರ್ಷಿಕೆಯ ಕಲಾಕೃತಿಗಳಲ್ಲಿ ಆಕೆಯ ವಚನಗಳನ್ನು ರೇಖೆ,ರೂಪ,ಬಣ್ಣಗಳೊಂದಿಗೆ ವಿಶಿಷ್ಟವಾಗಿ ದುಡಿಸಿಕೊಂಡಿದ್ದಾರೆ.
ರೇಖಾಚಿತ್ರ ವರ್ಣ ಚಿತ್ರಗಳಲ್ಲದೆ ಗ್ರಾಫಿಕ್ ಮಾಧ್ಯಮದ ಹಲವು ತಂತ್ರಗಳ ಪ್ರಿಂಟ್, ಶಿಲ್ಪ ಇತ್ಯಾದಿ ಪ್ರಕಾರಗಳಲ್ಲಿ ಅಭಿವ್ಯಕ್ತಿಸಿದವರು ಅವರು. ತಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ತಾವು, ಹಲವು ಮಾಧ್ಯಮ, ಕಲಾಪ್ರಕಾರಗಳನ್ನು ಕಲಿತು, ಅರಿತು ಕಲಿಸುತ್ತಲೇ ರಾಷ್ಟ್ರ ರಾಜ್ಯದ ಅಸಾಮಾನ್ಯರನ್ನು ಆಹ್ವಾನಿಸಿ ತಮ್ಮ ವಿದ್ಯಾರ್ಥಿಗಳ ವಿಶಿಷ್ಟ ಬೆಳವಣಿಗೆಗೆ ಕಾರಣರಾದವರು. ದೇಶ ವಿದೇಶಗಳ ಕಲಾವಿದ ಕಲಾವಿದೆಯರೇ ಅಲ್ಲದೆ ಕಲ ಇತಿಹಾಸಕಾರ ವಿಮರ್ಶಕನ್ನು ಒಟ್ಟಾಗಿಸುವ ಇಂಟರ್ನ್ಯಾಷನಲ್ ಆರ್ಟ್ ಸಿಂಪೋಸಿಯಂ ಒಂದನ್ನು ತಮ್ಮ ಐಡಿಯಲ್ ಫೈನ್ ಆರ್ಟ್ ನಲ್ಲಿ ಆಯೋಜಿಸಿದ್ದರು. ಸಹಜವಾಗಿ ತಮ್ಮ ಭಾಗದ, ವಿದ್ಯಾರ್ಥಿಗಳ ಬದುಕಿನ, ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವವರು.
ಹೀಗಾಗಿಯೂ ಅವರನ್ನು ಟೀಕಿಸುವ ವಿದ್ಯಾರ್ಥಿಗಳೂ “ಬಯಲ ಬೆಳಕು” ಸಂಭಾವನಾ ಗ್ರಂಥದಲ್ಲಿ ಪ್ರೀತಿಯಿಂದ ಬರೆಯುವಂತೆ ಮಾಡಿದ ವಿಶಿಷ್ಟ ವ್ಯಕ್ತಿತ್ವ ಹೊಂದಿರುವವರು ಅಂದಾನಿ. ಕಲ್ಯಾಣ ಕರ್ನಾಟಕದ ಕನ್ನಡದಲ್ಲಿ ಅತ್ಯುತ್ತಮವಾಗಿ, ಸುದೀರ್ಘವಾಗಿ ಮಾತನಾಡಬಲ್ಲ ಅಂದಾನಿ ” ನೆನಪಿನ ನೆರಳಲ್ಲಿ ” ಆತ್ಮಚರಿತ್ರೆಯನ್ನು ಪ್ರಕಟಿಸಿದ್ದಾರೆ. ಹಲವು ಬರೆಹಗಳನ್ನು ಬರೆದಿದ್ದಾರೆ. ಅವರ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ,ಅಸಾಮಾನ್ಯರಾದ ಈರಣ್ಣ, ಪಿ.ಬಿ. ಅರಸು, ವೀರೇಂದ್ರ ಶಾ ಮೊದಲಾದವರು ಇದ್ದಾರೆ.
ಅಪರೂಪದ ಕನಸುಗಾರರಾಗಿ ಬಹುತೇಕ ಗುರಿಗಳನ್ನು ಸಾಧಿಸಿರುವ ಅಂದಾನಿಯವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಏನನ್ನಾದರೂ ಮಾಡಬಲ್ಲ, ಎಲ್ಲ ರೀತಿಯ ಪ್ರಭಾವ, ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಮೊನ್ನೆ ಬೆಂಗಳೂರಿನ CKP ಯ ಮಿತ್ರರಆಶ್ರಯದ, ಅಂದಾನಿ 75 ರ ಸಂತಸದ ಕಾರ್ಯಕ್ರಮ(26.8…2024), ಲಲಿತ ಕಲಾಅಕಾಡೆಮಿಯ ಗೌರವ ಕಾರ್ಯಕ್ರಮಗಳಲ್ಲಿ ಅವರು ಖುಷಿಯಿಂದಲೇ ಪಾಲ್ಗೊಂಡಿದ್ದರು. ಅವರ ವಿದ್ಯಾರ್ಥಿಪ್ರೀತಿ ಎಷ್ಟೆಂದರೆ,ಬಹು ಸಂಖ್ಯೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆ ಜೊತೆಗೆ ದೂರದ ದೆಹಲಿಯಿಂದ ಈರಣ್ಣ ದಾವಿಸಿ ಬರುವಷ್ಟು : ಎಲ್ಲರಿಗೂ ಸಂತೋಷ ನೀಡುವಷ್ಟು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ದಿವಂಗತ ಎಂ.ಎಸ್. ನಂಜುಂಡರಾವ್ಅವರು ಅಂದಾನಿ ಅವರಿಗೆ ಒಂದು ವಿಶಿಷ್ಟ ಮಾದರಿಯಾಗಿದ್ದರು . ಹೀಗಾಗಿ ಪರಿಷತ್ತಿನ ಬಳಗದೊಂದಿಗೆ ಅವರ ಸ್ನೇಹ ಸಾಮ್ರಾಜ್ಯವು ಅತ್ಯುನ್ನತವಾದುದು.
KV Subramanyam 


Vishwanath Guggari
";